alex Certify ಮನಸ್ಸನ್ನು ಉಲ್ಲಾಸಗೊಳಿಸುತ್ತೆ ಗುಲಾಬಿ ಟೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸನ್ನು ಉಲ್ಲಾಸಗೊಳಿಸುತ್ತೆ ಗುಲಾಬಿ ಟೀ

ತೂಕ ಇಳಿಸಿಕೊಳ್ಳಲು ಅನೇಕರು ಡಯೆಟ್, ವ್ಯಾಯಾಮ ಮಾಡ್ತಾರೆ. ಆದ್ರೆ ಬಹುತೇಕರ ತೂಕ ಎಷ್ಟು ಪ್ರಯತ್ನಪಟ್ಟರೂ ಕಡಿಮೆಯಾಗೋದಿಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಸುಂದರ ಗುಲಾಬಿ ಹೂ ನಿಮಗೆ ನೆರವಾಗಬಹುದು.

ಯಸ್, ಗುಲಾಬಿ ಹೂವಿನಲ್ಲಿರುವ ಲ್ಯಾಕ್ಸೆಟಿವ್ ಗುಣ ನಿಮ್ಮ ಚಯಾಪಚಯವನ್ನು ಸರಿಪಡಿಸುತ್ತದೆ. ಹಾಗೆ ಹೊಟ್ಟೆಯಲ್ಲಿರುವ ಟಾಕ್ಸಿನ್ ತೆಗೆದುಹಾಕುತ್ತದೆ. ಚಯಾಪಚಯ ವೇಗವಾಗಿ ನಡೆಯುವುದ್ರಿಂದ ಕ್ಯಾಲೋರಿ ವೇಗವಾಗಿ ಕಡಿಮೆಯಾಗುತ್ತದೆ. ಇದು ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ.

ಆಯುರ್ವೇದದಲ್ಲಿ ಗುಲಾಬಿ ಎಸಳನ್ನು ಔಷಧಿಗಾಗಿ ಬಳಸ್ತಾರೆ. ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟು ಸುಸ್ತಾಗಿದ್ದರೆ ನೀವು ಗುಲಾಬಿಯನ್ನು ಬಳಸಿನೋಡಿ.

ಮೊದಲು 10-15 ಗುಲಾಬಿ ದಳವನ್ನು ಸ್ವಚ್ಛಗೊಳಿಸಿ. ಒಂದು ಲೋಟ ನೀರಿಗೆ ದಳವನ್ನು ಹಾಕಿ ಕುದಿಸಿ. ನೀರಿನ ಬಣ್ಣ ಕಂದು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದ ನಂತ್ರ ನೀರಿಗೆ ಚಿಟಕಿ ಏಲಕ್ಕಿ ಪುಡಿ ಹಾಗೂ ಜೇನುತುಪ್ಪವನ್ನು ಹಾಕಿ. ದಿನದಲ್ಲಿ ಎರಡು ಬಾರಿ ಟೀ ರೂಪದಲ್ಲಿ ಇದನ್ನು ಸೇವನೆ ಮಾಡಿ. ಇದು ಕೇವಲ ತೂಕ ಕಡಿಮೆ ಮಾಡುವುದೊಂದೇ ಅಲ್ಲ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...