ಫೆಬ್ರವರಿ 7ರಂದು ಬಿಡುಗಡೆಗೆ ಸಜ್ಜಾಗಿದೆ ರೂಪೇಶ್ ಶೆಟ್ಟಿ ಅಭಿನಯದ ‘ಅಧಿಪತ್ರ’ 11-12-2024 12:57PM IST / No Comments / Posted In: Featured News, Live News, Entertainment ರೂಪೇಶ್ ಶೆಟ್ಟಿ ಅಭಿನಯದ ‘ಅಧಿಪತ್ರ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ವರ್ಷ ಫೆಬ್ರವರಿ 7ರಂದು ಬಿಡುಗಡೆಗೆ ಸಜ್ಜಾಗಿದೆ. ಚಯನ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾ ತನ್ನ ಟೀಸರ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದೆ. ಈ ಚಿತ್ರವನ್ನು ಕೆ ಆರ್ ಸಿನಿ ಕಂಬೈನ್ಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸತೀಶ್ ಶೆಟ್ಟಿ ನಿರ್ಮಾಣ ಮಾಡಿದ್ದು, ರೂಪೇಶ್ ಶೆಟ್ಟಿ ಅವರಿಗೆ ಜೋಡಿಯಾಗಿ ಜಾನ್ವಿ ಅಭಿನಯಿಸಿದ್ದಾರೆ.ಇನ್ನುಳಿದಂತೆ ರಘು ಪಾಂಡೇಶ್ವರ್, ಎಂಕೆ ಮಾತಾ, ಪ್ರಕಾಶ್ ತೂಮಿನಾಡು, ದೀಪಕ್ ರೈ, ಕಾರ್ತಿಕ್ ರಾವ್, ನಟನಾ ಪ್ರಶಾಂತ್, ಪ್ರದೀಪ್, ಪ್ರಭಾಕರ್ ಕುಂದರ್ ವಿದ್ಯಾ, ಉಳಿದ ತಾರಾಂಗಣದಲ್ಲಿದ್ದಾರೆ ರಾಹುಲ್ ಶ್ರೀಕಾಂತ್ ಸಂಕಲನ, ನಿರ್ದೇಶಕ ಚಯನ್ ಶೆಟ್ಟಿ ಅವರ ಸಂಭಾಷಣೆ, ಶ್ರೀಕಾಂತ್ ಛಾಯಾಗ್ರಾಹಣವಿದೆ.