ಕೋಲ್ಕತಾ: ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ರೊನಾಲ್ಡಿನೊ ಗೌಚೊ ಭಾನುವಾರ ರಾತ್ರಿ ಕೋಲ್ಕತ್ತಾಗೆ ಬಂದಿಳಿದ ಅವರು ವಿಶೇಷ ಸಭೆಗಾಗಿ ಮರುದಿನವೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ.
ವಿಶೇಷವಾಗಿ ದಸರಾ ಹಬ್ಬದ ಈ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿರುವ ರೊನಾಲ್ಡಿನೊ ಹಲವಾರು ಕಾರ್ಯಕ್ರಮಗಳು ಮತ್ತು ನಗರದಲ್ಲಿ ದುರ್ಗಾ ಪೂಜೆ ಉತ್ಸವಗಳಲ್ಲಿ ಭಾಗವಹಿಸಿದ್ರು. 43ರ ಹರೆಯದ ರೊನಾಲ್ಡಿನೊ ನಗರದಲ್ಲಿ ದುರ್ಜಾಪೂಜಾ ಮಂಟಪವನ್ನು ಸಹ ಉದ್ಘಾಟಿಸಿದರು.
ಕೋಲ್ಕತ್ತಾದಲ್ಲಿರುವ ಬ್ರೆಜಿಲಿಯನ್ ಪುಟ್ಬಾಲ್ ದಂತಕಥೆ ತಮ್ಮ ಎರಡು ದಿನಗಳ ಭೇಟಿಯಲ್ಲಿ ಮಾಜಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ರೊನಾಲ್ಡಿನೊ ಅಕ್ಟೋಬರ್ 17 ರಂದು ಬಾಟಾ ಮೈದಾನ ಮತ್ತು ಮಹೇಸ್ತಲ ಕ್ರೀಡಾಂಗಣದಲ್ಲಿ ಡೈಮಂಡ್ ಹಾರ್ಬರ್ ಎಫ್‌ಸಿ ಮತ್ತು ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್ ನಡುವಿನ ಪ್ರದರ್ಶನ ಪಂದ್ಯದಲ್ಲಿ ಆಡಿದ್ದಾರೆ. ಇದು ಕೋಲ್ಕತ್ತಾಗೆ ರೊನಾಲ್ಡಿನೊ ಅವರ ಮೊದಲ ಪ್ರವಾಸವಾಗಿದೆ. ಭಾರತದ ಫುಟ್‌ಬಾಲ್ ರಾಜಧಾನಿ ಎಂದು ಪರಿಗಣಿಸಲಾದ ಕೋಲ್ಕತ್ತಾದಲ್ಲಿ ರೊನಾಲ್ಡಿನೊ ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ.
ತಾನು ಕ್ರಿಕೆಟ್ ಅಂದ್ರೆ ಬಹಳ ಇಷ್ಟಪಡುತ್ತೇನೆ. ಬಂಗಾಳದ ‘ದಾದಾ’ ಅವರಿಂದ ಕ್ರಿಕೆಟ್ ಕಲಿಯಲು ಬಯಸುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ರೊನಾಲ್ಡಿನೊ ಬಂಗಾಳ ಭಾಷೆಯಲ್ಲಿ ಹೇಳಿದ್ರು. ಬಳಿಕ ಅವರು ಭೂಮಿ ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ಯುವ ಆಟಗಾರರು ಮತ್ತು ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದ್ರು. ಅಲ್ಲದೆ ಫುಟ್‌ಬಾಲ್ ಕೂಡ ಆಡಿ ಗಮನ ಸೆಳೆದರು.