![Romantic Stunt! Couple Caught Performing Dangerous Romance On Speeding KTM Bike In Jashpur; SP Shoots VIDEO & Issues Challan](https://media.assettype.com/freepressjournal/2024-05/ff9976c8-8f66-4668-8c90-21c50678fc33/Bike_Hero.jpg)
ಯುವ ಜೋಡಿಯೊಂದು ಬೈಕ್ ಓಡಿಸುವಾಗ ಪರಸ್ಪರ ತಬ್ಬಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಛತ್ತೀಸ್‌ಗಢದ ಜಶ್‌ಪುರದಲ್ಲಿ ನಡೆದಿದೆ ಎನ್ನಲಾಗಿದೆ. ಈ ಜೋಡಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕಿಸಿದ್ದರೆ, ಪೊಲೀಸರು ದಂಡ ಹಾಕಿದ್ದಾರೆ. ವೀಡಿಯೋದಲ್ಲಿ ಯುವತಿ ಬೈಕ್ ಚಲಾಯಿಸುತ್ತಿರುವ ತನ್ನ ಸಂಗಾತಿಯ ಎದುರಾಗಿ ಇಂಧನ ಟ್ಯಾಂಕ್ ಮೇಲೆ ಕುಳಿತಿದ್ದಾಳೆ. ಬೈಕ್ ಸವಾರಿ ವೇಳೆ ಆಕೆ ಯುವಕನನ್ನು ಅಪ್ಪಿಕೊಂಡಿರುತ್ತಾಳೆ.
ಈ ವೇಳೆ ಜಶ್‌ಪುರದ ಪೊಲೀಸ್ ಅಧೀಕ್ಷಕ (ಎಸ್‌ಪಿ) ಶಶಿ ಮೋಹನ್ ಸಿಂಗ್, ಅವರು ತಮ್ಮ ಕಾರಿನಿಂದ ನೋಡಿದ್ದು ಈ ಕ್ಷಣವನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡ ಶಶಿ ಮೋಹನ್ ಸಿಂಗ್, ಬೈಕ್ ಚಲಾಯಿಸುತ್ತಿದ್ದ ವಿನಯ್ ವಿರುದ್ಧ 500 ರೂ. ದಂಡ ಹಾಕಿದ್ದಾರೆ.
ವಿಚಾರಣೆ ನಡೆಸಿದಾಗ ಅವರಿಬ್ಬರೂ ಮಯಾಲಿ ಅಣೆಕಟ್ಟಿಗೆ ಭೇಟಿ ನೀಡಲು ಬಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಬೇಡಿ ಎಂದ ಪೊಲೀಸರು ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸುವಂತೆ ಒತ್ತಾಯಿಸಿದರು. ಯಾರಾದರೂ ಇದೇ ರೀತಿಯ ಸಾಹಸ ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.