ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ಅಭಿನಯದ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ರೋಮ್ಯಾಂಟಿಕ್ ವಿಡಿಯೋ ಹಾಡೊಂದನ್ನ ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ಕದ್ದು ಕದ್ದು ಕೊಡು” ಎಂಬ ಈ ಹಾಡಿಗೆ ನಕುಲ್ ಅಭ್ಯಂಕರ್ ಧ್ವನಿಗೂಡಿಸಿದ್ದು, ಹರೀಶ್ ಸಂಗೀತ, ನಾಗಾರ್ಜುನ ಶರ್ಮ ಸಾಹಿತ್ಯವಿದೆ.
ನವೀನ್ ದ್ವಾರಕೀಶ್ ನಿರ್ದೇಶನದ ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿದ್ದು, ರವಿಶಂಕರ್, ತಬಲ ನಾಣಿ, ಸುಧಾ ಬೆಳವಾಡಿ, ಬಾಬು ಈರಣ್ಣಯ್ಯ, ರಮೇಶ್ ಭಟ್ ಹಾಗೂ ಸಿಹಿ ಕಹಿ ಚಂದ್ರು ಸೇರಿದಂತೆ ಹಲವರ ತಾರಾ ಬಳಗವಿದೆ. ನಿಶ್ಚಲ್ ಫಿಲಂಸ್ ಬ್ಯಾನರ್ ನಲ್ಲಿ ನವೀನ್ ರಾವ್ ನಿರ್ಮಾಣ ಮಾಡಿದ್ದಾರೆ.