ರತ್ನ ತೀರ್ಥ ನಿರ್ದೇಶನದ ರಿಷಿ ಅಭಿನಯದ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದ ‘ಲವ್ ಅಂದ್ರೆ ಸುಮ್ನೇನಾ’ ಎಂಬ ರೋಮ್ಯಾಂಟಿಕ್ ಮೆಲೋಡಿ ಗೀತೆ ಇಂದು youtube ನಲ್ಲಿ ಬಿಡುಗಡೆಯಾಗಿದೆ. ಅಮೃತ ವರ್ಷಿಣಿ ಕುಲಕರ್ಣಿ ಮತ್ತು ಲೋಕೇಶ್ ಈ ಹಾಡಿಗೆ ಧ್ವನಿಯಾಗಿದ್ದು, ಅನಿಲ್ ಕೃಷ್ಣ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಜನನಿ ಫಿಲಂಸ್ ಬ್ಯಾನರ್ ನಲ್ಲಿ ಪ್ರಶಾಂತ್ ಬಿ.ಜೆ. ನಿರ್ಮಾಣ ಮಾಡಿದ್ದು ರಿಷಿ ಸೇರಿದಂತೆ ಋಷಿಕರಾಜ್, ಶೌರ್ಯ ಶಂಕರ್ ಬಣ್ಣ ಹಚ್ಚಿದ್ದಾರೆ. ವಿಜಯರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಉಜ್ವಲ್ ಚಂದ್ರ ಸಂಕಲನ, ಸತೀಶ್ ರಾಜೇಂದ್ರನ್, ಕಿರಣ್ ಹಂಪಾಪುರ ಛಾಯಾಗ್ರಾಹಣ, ಶಂಕರ್ ಕಲಾ ನಿರ್ದೇಶನ, ಸುಶ್ಮಿತಾ ಶೆಟ್ಟಿ, ಕಾವೇರಿ ವೇಷಭೂಷಣ, ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನವಿದೆ.