
ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಭಿಮಾನಿಯನ್ನು ಹಿಡಿದು ನೆಲಕ್ಕೆ ಹಾಕಿದ ಪೊಲೀಸರಿಗೆ ರೋಹಿತ್ ಶರ್ಮಾ, ದಯವಿಟ್ಟು ಸೌಮ್ಯದಿಂದ ವರ್ತಿಸಿ ಎಂದು ಮನವಿ ಮಾಡಿದ್ದಾರೆ.
ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಟಿ20 ವಿಶ್ವಕಪ್ 2024 ಅಭ್ಯಾಸ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಅಲ್ಲಿ ಅಭಿಮಾನಿಯೊಬ್ಬ ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ಓಡಿಹೋಗಿ ರೋಹಿತ್ ಶರ್ಮಾ ಕೈಕುಲುಕಿ ತಬ್ಬಿಕೊಳ್ಳಲು ಯತ್ನಿಸಿದ.
ಭದ್ರತಾ ಲೋಪ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಅಧಿಕಾರಿಗಳು ಅಭಿಮಾನಿಯನ್ನು ತ್ವರಿತವಾಗಿ ನೆಲದ ಮೇಲೆ ಹಾಕುತ್ತಾರೆ. ಬಳಿಕ ಆತನನ್ನು ವಶಕ್ಕೆ ಪಡೆದು ಕ್ರೀಡಾಂಗಣದಿಂದ ಹೊರಕ್ಕೆ ಕರೆದೊಯ್ಯುತ್ತಾರೆ.
ಈ ವೇಳೆ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅಭಿಮಾನಿಗೆ ಹೆಚ್ಚು ಹಿಂಸೆ ನೀಡದೇ ಸೌಮ್ಯದಿಂದ ನಿಭಾಯಿಸುವಂತೆ ಮನವಿ ಮಾಡಿದರು. ಅವರ ಮನವಿಯ ಹೊರತಾಗಿಯೂ, ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದು ಸ್ಥಳದಲ್ಲಿ ಬಿಗಿಯಾದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು.
ಶನಿವಾರ ನಡೆದ ಟಿ 20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 60 ರನ್‌ಗಳ ಜಯ ಸಾಧಿಸಿತು.
— ARVIND SINGH RAJPUROHIT (@avrajpurohit108) June 1, 2024