
ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹುಟ್ಟುಹಬ್ಬಕ್ಕೆ ಅವರ ಮಗಳು ಸಮಾಯ್ರಾ ಮುದ್ದು ಮುದ್ದಾದ ಗ್ರೀಟಿಂಗ್ ಒಂದನ್ನು ರಚಿಸಿದ್ದಾಳೆ.
ಏಪ್ರಿಲ್ 30ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ರೋಹಿತ್ ಶರ್ಮಾಗೆ ಮಗಳು ಹೀಗೆ ಗ್ರೀಟಿಂಗ್ ಮಾಡುತ್ತಿರುವ ವಿಡಿಯೋವನ್ನು ಅವರ ಪತ್ನಿ ರಿತಿಕಾ ಸಾಜ್‌ದೇಹ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಅಖಾಡಕ್ಕಿಳಿದಿದ್ದ ರೋಹಿತ್ ಶರ್ಮಾಗೆ, ಮಗಳು ಸಮಾಯ್ರಾ ವಿಐಪಿ ಪೆವಿಲಿಯನ್‌ನಲ್ಲಿ ಕುಳಿತು ಗ್ರೀಟಿಂಗ್ಸ್ ತೋರಿದ್ದಾಳೆ. ಈ ವಿಡಿಯೋ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಭಾರೀ ಇಷ್ಟವಾಗಿದೆ.