ಜೈಪುರ: ನ್ಯೂಜಿಲೆಂಡ್ ವಿರುದ್ಧ ಪೂರ್ಣಾವಧಿಯ ನಾಯಕನಾಗಿ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಹಿಟ್ಮ್ಯಾನ್ ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.
ಭಾರತವು ಬ್ಲ್ಯಾಕ್ ಕ್ಯಾಪ್ಸ್ ಅನ್ನು ತೆಗೆದುಕೊಳ್ಳುವ ಮೊದಲು, ಭಾರತೀಯ ಆರಂಭಿಕ ಆಟಗಾರನ ಅಭಿಮಾನಿಗಳು 9 ವರ್ಷದ ಹಳೆಯ ಟ್ವೀಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಅದರಲ್ಲಿ ಶರ್ಮಾ ಅವರು, ಜೈಪುರವನ್ನು ತಲುಪಿದೆ, ಮುಂಬೈ ತಂಡವನ್ನು ಮುನ್ನಡೆಸುವ ಬಗ್ಗೆ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಹಾಗೂ ಹೆಚ್ಚುವರಿ ಜವಾಬ್ದಾರಿಯನ್ನು ಎದುರು ನೋಡುತ್ತಿರುವುದಾಗಿ ಶರ್ಮಾ ನವೆಂಬರ್ 7, 2012 ರಲ್ಲಿ ಟ್ವೀಟ್ ಮಾಡಿದ್ದರು.
ಅಂದಹಾಗೆ, 2007 ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಶರ್ಮಾ, ಆ ಕ್ಷಣವನ್ನು ಇನ್ನೂ ಕೂಡ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. ಐರ್ಲೆಂಡ್ ವಿರುದ್ಧದ ಚೊಚ್ಚಲ ಏಕದಿನ ಪಂದ್ಯದಿಂದ ರೋಹಿತ್ ಶರ್ಮಾ ತನ್ನ ಕ್ರಿಕೆಟ್ ಜರ್ನಿ ಶುರು ಮಾಡಿದ್ದರು.
ಬುಧವಾರ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯ ಆರಂಭಕ್ಕೂ ಮುನ್ನ, ದ್ರಾವಿಡ್ ಹಾಗೂ ಶರ್ಮಾ ಇದನ್ನು ನೆನಪಿಸಿಕೊಂಡಿದ್ದಾರೆ. ಸಮಯ ಎಷ್ಟು ಬೇಗ ಕಳೆದುಹೋಯಿತು ಅನ್ನೋದೆ ಗೊತ್ತಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕಳೆದ 14 ವರ್ಷಗಳಲ್ಲಿ ಒಬ್ಬ ವ್ಯಕ್ತಿಯಾಗಿ ಅವರು ನಾಯಕರಾಗಿ ಬೆಳೆದ ರೀತಿ ನಿಜಕ್ಕೂ ಅದ್ಭುತ. ಭಾರತ ತಂಡದ ಆಟಗಾರನಾಗಿ ಮತ್ತು ಮುಂಬೈ ಇಂಡಿಯನ್ಸ್ನ ನಾಯಕನಾಗಿ ಅವರು ಸಾಧಿಸಿರುವುದು ಅದ್ಭುತವಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.