ಭಾರತ ಮಾತ್ರವಲ್ಲದೆ ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರೋಹಿತ್ ಒಂದು ಕಾಲದಲ್ಲಿ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಈಗ ಕೋಟಿ ಕೋಟಿ ಸಂಪತ್ತಿಗೆ ಒಡೆಯರಾಗಿದ್ದಾರೆ.
ಟೀಂ ಇಂಡಿಯಾದ ಸ್ಟ್ರಾಂಗ್ ಓಪನರ್ ಹಾಗೂ ನಾಯಕ ರೋಹಿತ್ ಶರ್ಮಾಗೆ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ರೋಹಿತ್ ಮೈದಾನಕ್ಕೆ ಬಂದರೆ ಸಾಕು ಕ್ರಿಕೆಟ್ ಅಭಿಮಾನಿಗಳ ಭರವಸೆ ಮತ್ತು ವಿಶ್ವಾಸ ಅವರ ಮೇಲಿರುತ್ತದೆ. ರೋಹಿತ್ ಬಳಿ ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳಿವೆ. ಮುಂಬೈನ ವರ್ಲಿಯಲ್ಲಿರೋ 53 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ರೋಹಿತ್ ಶರ್ಮಾ ಮನೆಯಿದೆ. ಕಟ್ಟಡದ 29ನೇ ಮಹಡಿಯಲ್ಲಿ ಅವರ ಕುಟುಂಬ ವಾಸಿಸುತ್ತಿದೆ.
ಮುಂಬೈನ ಐಷಾರಾಮಿ ಪ್ರದೇಶಗಳಲ್ಲಿ ಇದು ಕೂಡ ಒಂದು. ಸೀ ವ್ಯೂ ಇರುವ ಸುಂದರ ಅಪಾರ್ಟ್‌ಮೆಂಟ್ ಇದು. ರೋಹಿತ್ ಶರ್ಮಾರ ಈ ಮನೆಯ ಬೆಲೆ ಸುಮಾರು 30 ಕೋಟಿ ರೂಪಾಯಿ. 2015ರಲ್ಲಿ ರಿತಿಕಾ ಅವರನ್ನು ಮದುವೆಯಾದ ವರ್ಷವೇ ರೋಹಿತ್ ಈ ಮನೆಯನ್ನು ಖರೀದಿಸಿದರು. ರೋಹಿತ್ ಶರ್ಮಾರ ನಿವಾಸ 6000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮನೆಯನ್ನು ಸಿಂಗಾಪುರದ ಇಂಟೀರಿಯರ್ ಡಿಸೈನರ್ ಮತ್ತು ವಾಸ್ತುಶಿಲ್ಪಿ ಪಾಮರ್ & ಟರ್ನರ್ ವಿನ್ಯಾಸಗೊಳಿಸಿದ್ದಾರೆ.
ರೋಹಿತ್-ರಿತಿಕಾ ಮನೆಯಲ್ಲಿ ಅದ್ಭುತವಾದ ಮಾರ್ಬಲ್ ವರ್ಕ್ ಮಾಡಲಾಗಿದೆ. ಊಟದ ಹಾಲ್ ಸಾಕಷ್ಟು ದೊಡ್ಡದಾಗಿದೆ. ವಿಶಿಷ್ಟ ವಿನ್ಯಾಸದ ಡೈನಿಂಗ್ ಟೇಬಲ್ ಅಲ್ಲಿನ ಆಕರ್ಷಣೆ. ಮಗಳಿಗಾಗಿ ಪ್ರತ್ಯೇಕ ಕೋಣೆಯಿದೆ. ಮಕ್ಕಳನ್ನು ಆಕರ್ಷಿಸುವಂಥ ಪೇಂಟಿಂಗ್ ಹಾಗೂ ವಿನ್ಯಾಸ ಮಾಡಲಾಗಿದೆ. 4 ಬೆಡ್ ರೂಮ್‌ಗಳಿರುವ ವಿಸ್ತಾರವಾದ ಮನೆ ಇದು. ಲಿವಿಂಗ್ ರೂಮಿನಲ್ಲಿ ಐವರಿ ಲೆದರ್ ಸೋಫಾ, ಟಚ್ ಪ್ಯಾನೆಲ್ ಹೊಂದಿರುವ ವಾಯ್ಸ್ ಕಮಾಂಡ್ ಸಿಸ್ಟಮ್ ಗಮನಸೆಳೆಯುತ್ತದೆ. ಲೈಟಿಂಗ್ ಕೂಡ ಅತ್ಯದ್ಭುತವಾಗಿದೆ.