
ಶನಿವಾರದಂದು ರೋಹಿತ್ ಶರ್ಮಾ ಅವರಿಗೆ ಇಂಗ್ಲೆಂಡಿನ ಲಿಸಿಸ್ಟರ್ ನಲ್ಲಿ ರ್ಯಾಪಿಡ್ ಅಂಟಿಜನ್ ಟೆಸ್ಟ್ ನಡೆಸಲಾಗಿದ್ದು, ವೇಳೆ ಪಾಸಿಟಿವ್ ಕಂಡುಬಂದಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಸೋಂಕಿಗೊಳಗಾಗಿರುವ ರೋಹಿತ್ ಶರ್ಮಾ ಅವರನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದ್ದು, ಬಿಸಿಸಿಐ ವೈದ್ಯಕೀಯ ತಂಡ ನಿಗಾ ಇರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯ ಆಡಲಿದ್ದಾರಾ ಎಂಬುದು ತಿಳಿದುಬಂದಿಲ್ಲ.