ಸೇಂಟ್ ಲೂಸಿಯಾ: ಆಸ್ಟ್ರೇಲಿಯಾ ವಿರುದ್ಧ 24 ರನ್‌ಗಳ ಜಯದೊಂದಿಗೆ ಅಜೇಯ ತಂಡವಾಗಿ ಭಾರತ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ.
ಸೋಮವಾರ ಸೇಂಟ್ ಲೂಸಿಯಾದ ಡೇರೆನ್ ಸಮ್ಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಮಗ್ರ ಗೆಲುವು ಸಾಧಿಸುವ ಮೂಲಕ 2024 ರ ಐಸಿಸಿ ಪುರುಷರ T20 ವಿಶ್ವಕಪ್‌ನ ಸೆಮಿಫೈನಲ್‌ಗೆ ಭಾರತ ಪ್ರವೇಶಿಸಿತು. ನಾಯಕ ರೋಹಿತ್ ಶರ್ಮಾ ಅವರ ಬಿರುಸಿನ ಆಟ ತಂಡದ ಗೆಲುವಿಗೆ ನೆರವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ರೋಹಿತ್ ಶರ್ಮ 92, ಸೂರ್ಯ ಕುಮಾರ್ ಯಾದವ್ 31, ಶಿವಂ ದುಬೆ 28, ಹಾರ್ದಿಕ್ ಪಾಂಡ್ಯ ಅಜೇಯ 27 ರನ್ ಗಳಿಸಿದರು. ಆಸ್ಟ್ರೇಲಿಯಾ ಪರವಾಗಿ ವಿಚಲ್ ಸ್ಟಾರ್ಕ್ 2, ಮಾರ್ಕಸ್ಟೋನಿಯಸ್ 2 ವಿಕೆಟ್ ಪಡೆದರು.
206 ರನ್ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಟ್ರಾವಿಸ್ ಹೆಡ್ 76, ಮಿಚೆಲ್ ಮಾರ್ಷ್ 37, ಗ್ಲೆನ್ ಮ್ಯಾಕ್ಸ್ವೆಲ್ 22 ರನ್ ಗಳಿಸಿದರು. ಭಾರತದ ಪರವಾಗಿ ಅರ್ಷದೀಪ್ ಸಿಂಗ್ 3 ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಭಾರತ ಆಸ್ಟ್ರೇಲಿಯಾವನ್ನು 181/7 ಗೆ ಸೀಮಿತಗೊಳಿಸಿ 24 ರನ್‌ಗಳಿಂದ ಜಯಗಳಿಸಿದ್ದು, ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರಿಸಲಿದೆ.