ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ ಭಾರತ ತಂಡದ ಪ್ರತಿರೋಧದಾಟಕ್ಕೆ ಬಲವಾಗಿ ನಿಂತ ಆರಂಭಿಕ ರೋಹಿತ್ ಶರ್ಮಾ ಭರ್ಜರಿ ಶತಕ ಬಾರಿಸಿದ್ದಾರೆ.
ಓವಲ್ನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ಇನಿಂಗ್ಸ್ನಲ್ಲಿ 94ರನ್ ಗಳಿಸಿ ಅಜೇಯರಾಗಿ ಬ್ಯಾಟ್ ಮಾಡುತ್ತಿದ್ದ ಶರ್ಮಾ, ಸ್ಪಿನ್ನರ್ ಮೋಯಿನ್ ಅಲಿ ಎಸೆತದಲ್ಲಿ ಲಾಂಗ್ ಆನ್ ಮೇಲೆ ಸಿಕ್ಸರ್ ಸಿಡಿಸಿ ಶತಕ ತಲುಪಿದ್ದಾರೆ. ಶರ್ಮಾ ಹಾಗೂ ಪೂಜಾರಾರ ಉತ್ತಮ ಆಟದಿಂದ ಭಾರತ ತಂಡ ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ.
ರೋಹಿತ್ ಶರ್ಮಾಗೆ ಆರತಿ ಎತ್ತಿ ʼಆಲ್ ದಿ ಬೆಸ್ಟ್ʼ ಹೇಳಿದ ಸೂಪರ್ ಫ್ಯಾನ್
ಇದೇ ವೇಳೆ ಶರ್ಮಾರ ಸಿಕ್ಸ್ ಸಿಡಿಸಿ ಶತಕ ಬಾರಿಸಿದ್ದು, ಅನೇಕ ಅಭಿಮಾನಿಗಳಿಗೆ ವೀರೇಂದ್ರ ಸೆಹ್ವಾಗ್ ರನ್ನು ನೆನಪಿಸಿದೆ. 2004ರಲ್ಲಿ ಮುಲ್ತಾನ್ ಟೆಸ್ಟ್ನಲ್ಲಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಎಸೆತದಲ್ಲಿ ಸಿಕ್ಸರ್ ಮೂಲಕ ತ್ರಿಶಕ ಸಿಡಿಸಿದ್ದ ಸೆಹ್ವಾಗ್ರ ಆ ಆಟವನ್ನು ರೋಹಿತ್ ಇಂದಿನ ಆಟ ನೆನಪಿಸಿದೆ. ಈ ಹೋಲಿಕೆಯ ಅನೇಕ ಟ್ವಿಟ್ಗಳು ಹಾಗೂ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
https://twitter.com/monicas004/status/1434160074184867844?ref_src=twsrc%5Etfw%7Ctwcamp%5Etweetembed%7Ctwterm%5E1434160074184867844%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Frohit-sharma-maiden-overseas-century-england-oval-test-sehwag-twitter-memes-4165835.html