ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಿಎಟಿ ಆದೇಶ ನೀಡಿದ್ದು, ಬಿ. ಶರತ್ ಅವರ ಮರು ನೇಮಕಕ್ಕೆ ನಿರ್ದೇಶನ ನೀಡಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿ ಬಿ. ಶರತ್ ಅವರ ಮರು ನೇಮಕಕ್ಕೆ ಸೂಚನೆ ನೀಡಲಾಗಿದ್ದು, ಡಿಸೆಂಬರ್ 22 ರೊಳಗೆ ಈ ಸಂಬಂಧ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಅಡ್ವೊಕೇಟ್ ಜನರಲ್ ಗೆ ಕೋರ್ಟ್ ನಿಂದ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಡಿಸೆಂಬರ್ 22 ರಂದು ಸಿಇಟಿ ಈ ಬಗ್ಗೆ ಆದೇಶ ಹೊರಡಿಸಲಿದೆ ಎಂದು ಹೇಳಲಾಗಿದೆ.