ಬೆಂಗಳೂರು ಜನರು, ಅನಾಥ ಮಕ್ಕಳಿಗೆ ಕ್ರಿಸ್ಮಸ್ ಗಿಫ್ಟ್ ನೀಡಲು ಸೈಕಲ್ ಸವಾರಿ ನಡೆಸಿದ್ದಾರೆ. ಮಲ್ಲೇಶ್ವರಂನ ರಿಲೀಫ್ ರೈಡರ್ಸ್ ತಂಡ ಇದೇ ಗುರುವಾರ ಹಾಗೂ ಶುಕ್ರವಾರ ನಗರದ ಅನೇಕ ಅನಾಥಾಶ್ರಮಗಳಲ್ಲಿರೊ ಮಕ್ಕಳ ಪಾಲಿನ ಸಾಂಟಾ ಆಗಿದೆ. 12 ಜನ ಸೈಕಲ್ ಸವಾರಿಗಳು ನಗರದ ವಿವಿಧ ಭಾಗಗಳಿಗೆ ಸೈಕಲ್ ನಲ್ಲಿ ತೆರಳಿ ಅಲ್ಲಿನ ಅನಾಥ ಮಕ್ಕಳಿಗೆ ಉಡುಗೊರೆ ನೀಡಿದ್ದಾರೆ.
12 ಸೈಕಲ್ ಸವಾರರನ್ನ ಸೇರಿ ಒಟ್ಟು , 60 ಮಂದಿ ಸಾಂಟಾ ಆನ್ ಅ ಸೈಕಲ್(Santa on a bicycle) ಯೋಜನೆಗೆ ಕೈ ಜೋಡಿಸಿದ್ದರು. ವಾಟ್ಸ್ ಆ್ಯಪ್ ಸಂದೇಶದ ಮೂಲಕ ಶುರುವಾದ ಈ ಐಡಿಯಾ ಇಂದು ನಿಜವಾಗಿದೆ. ಕಳೆದ ತಿಂಗಳಿಂದ ನಾನಾ ಸಂಸ್ಥೆ ಧನಸಂಗ್ರಹ ಮಾಡಿ ಮಕ್ಕಳಿಗೆ ಯಾವ ಉಡುಗೊರೆ ನೀಡಬೇಕು, ಯಾವ ಪ್ರದೇಶಗಳಿಗೆ ತೆರಳಬೇಕು ಎಂದು ಯೋಜನೆ ಹಾಕಿಕೊಂಡಿದ್ದ ತಂಡ, ಸೈಕಲ್ ರೈಡ್ ಮೂಲಕವೇ ಬ್ಯಾಗ್, ಪುಸ್ತಕ, ಆಟದ ವಸ್ತು, ಚಾಕಲೇಟ್ಸ್ ಸೇರಿದಂತೆ ಹಲವಾರು ಉಡುಗೊರೆಗಳನ್ನ ಮಕ್ಕಳಿಗೆ ನೀಡಿ ಅನಾಥರ ಪಾಲಿನ ಸಾಂಟಾ ಆಗಿದೆ.
ಸ್ವಪ್ರಕಾಶ್ ಫೌಂಡೇಷನ್ ಸಹಯೋಗದೊಂದಿಗೆ, ವಿವಿಧ ಅನಾಥಾಲಯಗಳ ಐವತ್ತು ಮಕ್ಕಳನ್ನ ಒಂದೆಡೆ ಕರೆತಂದ ರೈಡರ್ಸ್ ತಂಡ ಮಕ್ಕಳಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿದೆ. ಮೊದಲು ಈ ತಂಡ ಹುಟ್ಟಿದ್ದೆ ಕೊರೋನಾ ಪೀಡಿತರಿಗೆ ಸಹಾಯ ಮಾಡಲು ಕಳೆದ ಎರಡು ಲಾಕ್ ಡೌನ್ ನಲ್ಲೂ ಆ್ಯಕ್ಟೀವ್ ಆಗಿದ್ದ ರಿಲೀಫ್ ರೈಡರ್ಸ್ ಈಗಾಗಲೇ ಸಾಕಷ್ಟು ಜನರಿಗೆ ಸಹಾಯಾಸ್ತ ಚಾಚಿದ್ದಾರೆ.