ಹಸುವಿನ ಸಗಣಿಯಲ್ಲಿರೋ ಹತ್ತಾರು ರೀತಿಯ ಪ್ರಯೋಜನಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಇದೀಗ ಜಪಾನ್ ಇಡೀ ವಿಶ್ವವನ್ನೇ ಅಚ್ಚರಿಗೊಳಿಸುವಂತಹ ಸಾಧನೆಯನ್ನು ಹಸುವಿನ ಸಗಣಿಯಿಂದ ಮಾಡಿ ತೋರಿಸಿದೆ. ಜಪಾನಿನ ಬಾಹ್ಯಾಕಾಶ ಸ್ಟಾರ್ಟ್‌ಅಪ್, ಇಂಟರ್‌ಸ್ಟೆಲ್ಲರ್ ಟೆಕ್ನಾಲಜೀಸ್ ತನ್ನ ಕಾಸ್ಮೊಸ್ ಎಂಜಿನ್ ಅನ್ನು ಝೀರೋ ರಾಕೆಟ್‌ಗಾಗಿ ಹೊಕ್ಕೈಡೋ ಸ್ಪೇಸ್‌ಪೋರ್ಟ್‌ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಡೀ ಜಗತ್ತನ್ನು ಅಚ್ಚರಿಗೊಳಿಸಿದೆ.
ವಿಶೇಷವೆಂದರೆ ಈ ರಾಕೆಟ್‌ನಲ್ಲಿ ಹಸುವಿನ ಸಗಣಿಯಿಂದ ತಯಾರಿಸಿದ ಮೀಥೇನ್ ಅನಿಲವನ್ನು ಬಳಸಲಾಗಿದ್ದು, ಅದು ಬಹಳ ಪರಿಣಾಮಕಾರಿಯಾಗಿದೆ. ಈ ಸಾಧನೆ ಮಾಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಜಪಾನ್ ಪಾತ್ರವಾಗಿದೆ. ಈ ರಾಕೆಟ್‌ನ ಪರೀಕ್ಷೆಯಲ್ಲಿ ಎಂಜಿನ್‌ಗೆ 10 ಸೆಕೆಂಡುಗಳ ಕಾಲ ಪ್ರಬಲವಾದ ಶಕ್ತಿಯನ್ನು ನೀಡಲಾಯಿತು. ಈ ವೇಳೆ ಶಕ್ತಿಯುತವಾದ ನೀಲಿ ಜ್ವಾಲೆಯೂ ಅದರಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ಜಪಾನ್‌ನ ಈ ಆವಿಷ್ಕಾರವು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸಗಣಿ-ಇಂಧನದ ರಾಕೆಟ್ ಎಂಜಿನ್ ತಂತ್ರಜ್ಞಾನವನ್ನೇ ಹೋಲುತ್ತದೆ. ಆದರೆ ಈ ಸಾಧನೆ ಮಾಡಿದ ಮೊದಲ ಖಾಸಗಿ ಕಂಪನಿ ಇಂಟರ್‌ಸ್ಟೆಲ್ಲರ್ ಟೆಕ್ನಾಲಜೀಸ್. ರಾಕೆಟ್‌ಗಾಗಿ ಸಿದ್ಧಪಡಿಸಲಾದ ಬಯೋಮೀಥೇನ್ ಇಂಧನವನ್ನು ಸ್ಥಳೀಯ ಡೈರಿ ಫಾರ್ಮ್‌ಗಳ ಹಸುವಿನ ಸಗಣಿ ಬಳಸಿ ತಯಾರಿಸಲಾಗುತ್ತದೆ. ಬಯೋಮಿಥೇನ್ ಇಂಧನವು ಪರಿಸರ ಸ್ನೇಹಿ. ಜೊತೆಗೆ ಉಳಿದ ಇಂಧನಗಳಿಗಿಂತ ಅಗ್ಗ. ಇದರಲ್ಲಿ ಕಾರ್ಬನ್ ಹೊರಸೂಸುವಿಕೆ ಇರುವುದಿಲ್ಲ.