ಕಾಂಗ್ರೆಸ್ ಅಂದರೆ ನೆನಪಾಗೋದೆ ಗಾಂಧಿ ಕುಟುಂಬ. ಸ್ವಾತಂತ್ರ್ಯ ಪೂರ್ವದಿಂದಲೂ ರಾಜಕೀಯದಲ್ಲಿರುವ ಈ ಕುಟುಂಬದ ಎಲ್ಲರಿಗೂ ಪಾಲಿಟಿಕ್ಸ್ ಅಂದ್ರೆ ಇಷ್ಟ. ಈಗ ಈ ಸಾಲಿಗೆ ಪ್ರಿಯಾಂಕ ಪತಿ ರಾಬರ್ಟ್ ವಾದ್ರಾ ಕೂಡ ಸೇರಲಿದ್ದಾರಾ ಎನ್ನುವ ಪ್ರಶ್ನೆ ಶುರುವಾಗಿದೆ. ಇದಕ್ಕೆ ಸ್ವತಃ ವಾದ್ರಾ ನೀಡಿರುವ ಉತ್ತರ 2024ರ ಚುನಾವಣೆಯ ಮೂಲಕ ಪ್ರಿಯಾಂಕ ಪತಿ ರಾಜಕೀಯ ಪ್ರವೇಶ ಪಕ್ಕಾ ಎಂಬ ಸುದ್ದಿ ಸದ್ದು ಮಾಡುತ್ತಿದೆ.
ಗಾಂಧಿ ಕುಟುಂಬದ ಅಳಿಯ ರಾಜಕೀಯ ನೆಲಕ್ಕೆ ಕಾಲಿಡುತ್ತಾರಾ ? ಈ ವಿಚಾರದಲ್ಲಿ ಪ್ರಶ್ನೆ ಕೇಳಿದಾಗಲೆಲ್ಲ ರಾಬರ್ಟ್, ಅತ್ಯಂತ ಜಾಣತನದಿಂದ ಉತ್ತರಿಸುತ್ತಿದ್ದರು. ಆದರೆ ಈ ಬಾರಿ ಖಾಸಗಿ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿರುವ ಅವರು, 2024ರ ಸಾರ್ವತ್ರಿಕ ಚುನಾವಣೆ ಮೂಲಕ ರಾಜಕೀಯಕ್ಕೆ ಕಾಲಿಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
‘ಮೋದಿ ಜಿ ಜಿಂದಾಬಾದ್’ ಘೋಷಣೆಗೆ ವಿದ್ಯಾರ್ಥಿಗಳ ನೀರಸ ಪ್ರತಿಕ್ರಿಯೆ….! ವಿಡಿಯೋ ವೈರಲ್
ನನ್ನಿಂದ ಒಳಿತಾಗುತ್ತದೆ ಎಂಬ ಭರವಸೆ ಜನಸಾಮಾನ್ಯರಲ್ಲಿದೆ. ಅವರಿಗೆ ನಾನು ನನ್ನ ತವರಾದ ಮೊರಾದಬಾದ್ ಅಥವಾ ಯುಪಿಯ ಯಾವುದಾದರು ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬ ನಿರೀಕ್ಷೆಯಿದೆ. 2024 ರ ಚುನಾವಣೆಗೆ ಪ್ರವೇಶಿಸಲು ಎಷ್ಟು ಅವಕಾಶಗಳಿವೆ ಎಂದು ನೋಡುತ್ತೇನೆ ಎಂದಿರುವ ವಾದ್ರಾ, ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬಿಗ್ ಮಾಹಿತಿ ನೀಡಿದ್ದಾರೆ.
ಚುನಾವಣೆ ಇರಲಿ, ಇಲ್ಲದಿರಲಿ ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್ ಗಳಿಗೆ ನಾನು ನಿತ್ಯ ಹೋಗುತ್ತೇನೆ. ಇಷ್ಟು ದಿನ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ರಾಜಕೀಯದಲ್ಲಿ ನನ್ನಿಂದ ಬದಲಾವಣೆ ತರಲು ಸಾಧ್ಯ ಎಂದು ಅನಿಸುತ್ತಿದೆ. ಪ್ರಿಯಾಂಕಾ ಮನೆಗೆ ಬಂದಾಗ, ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತೇನೆ. ಜನರ ಕಷ್ಟಗಳನ್ನು ಹೇಗೆ ಹೋಗಲಾಡಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ವಾದ್ರಾ ತಿಳಿಸಿದ್ದಾರೆ. ಒಟ್ಟಿನಲ್ಲಿ ವಾದ್ರಾ ಅವರ ಈ ಹೇಳಿಕೆಯಿಂದ ಮುಂದಿನ ಚುನಾವಣೆಯಲ್ಲಿ ಅವರಿಗೆ ಅವಕಾಶ ಸಿಗುತ್ತದೆಯೇ, ಸೋನಿಯಾ ಅಳಿಯ ರಾಜಕೀಯ ಕಣಕ್ಕೆ ಇಳಿಯುತ್ತಾರೆಯೇ ಎಂಬ ಚರ್ಚೆ ಶುರುವಾಗಿದೆ.