
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಬರಿ ಪ್ರಕರಣಗಳು ಹೆಚ್ಚುತ್ತಿವೆ. ಗನ್ ತೋರಿಸಿ ರಾಬರಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಜಾಫರ್ ಹಾಗೂ ಇಮ್ರಾನ್ ಬಂಧಿತ ಆರೋಪಿಗಳು. ವಿಚಾರಣೆಯ ವೇಳೆ ಆರೋಪಿಗಳ ಮತ್ತಷ್ಟು ಪ್ರಕರಣಗಳು ಬಯಲಾಗಿವೆ.
ಆರೋಪಿಗಳು ಇದೇ ರೀತಿ ಗನ್ ಹಿಡಿದು ಬೆದರಿಸಿ ಹಲವು ರಾಬರಿಗಳನ್ನು ಮಾಡಿದ್ದರು. ಬೆಂಗಳೂರಿನಲ್ಲಿಯೇ 5 ಕಡೆ ಆರೋಪಿಗಳು ರಾಬರಿ ಮಾಡಿದ್ದರು ಎಂಬುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.