ದೆಹಲಿಯ ಕೆಂಪು ಕೋಟೆ ಬಳಿ 40 ಲಕ್ಷ ರೂಪಾಯಿ ದರೋಡೆ ಮಾಡಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ವ್ಯಕ್ತಿ ತನ್ನ ಬೈಕನ್ನು ನಿಲ್ಲಿಸುತ್ತಿದ್ದಂತೆ, ಅವರ ಬ್ಯಾಗ್‌ನಿಂದ ಹಣವನ್ನು ಕದಿಯುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮಾರ್ಚ್ 1 ರ ಸಂಜೆ ಸಾಕಷ್ಟು ವಾಹನ ದಟ್ಟಣೆಯಿದ್ದಾಗ ಮೂವರು ಪುರುಷರು ಬೈಕನ್ನು ನಿಕಟವಾಗಿ ಹಿಂಬಾಲಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಸ್ಟಾಪ್ ಸಿಗ್ನಲ್ ನಲ್ಲಿ ವಾಹನ ನಿಧಾನವಾಗ್ತಿದ್ದಂತೆ ಕಳ್ಳರು ಬೇಗನೆ ಬೈಕನ್ನು ಸಮೀಪಿಸುತ್ತಾರೆ.
ಬೈಕ್ ಸವಾರನಿಗೆ ಗೊತ್ತಾಗದಂತೆ ಕಳ್ಳರಲ್ಲೊಬ್ಬ ಹಣ ಕದಿಯುತ್ತಾನೆ. ಪ್ರಕರಣ ಸಂಬಂಧ ಮೂವರಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಆಕಾಶ್ ಮತ್ತು ಅಭಿಷೇಕ್ ಶಂಕಿತ ಆರೋಪಿಗಳೆಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಕಳ್ಳತನಕ್ಕೆ ಈ ಗುಂಪು ಬೈಕ್ ಸವಾರರನ್ನು ಗುರಿಯಾಗಿಸಿಕೊಂಡಿತ್ತು.