ಜ್ಯುವೆಲ್ಲರಿ ಶಾಪ್ ಅಥವಾ ಬಟ್ಟೆ ಅಂಗಡಿ ಮುಂತಾದೆಡೆ ಕಳ್ಳರು ದರೋಡೆ ಮಾಡಿರುವ ಬಗ್ಗೆ ನೀವು ಕೇಳಿರ್ತೀರಾ. ಆದರೆ, ಕಳ್ಳರು ಮಕ್ಕಳ ಆಟಿಕೆ ಅಂಗಡಿಗೆ ನುಗ್ಗಿ ಕಳವುಗೈದಿರುವ ಬಗ್ಗೆ ಎಂದಾದ್ರೂ ಕೇಳಿದ್ದೀರಾ..?
ಜರ್ಮನಿಯಲ್ಲಿ ಈ ದರೋಡೆ ಪ್ರಕರಣ ನಡೆದಿದೆ. ಕಳ್ಳರು ಡಜನ್ಗಟ್ಟಲೆ ಲೆಗೊ ಸೆಟ್‌ಗಳನ್ನು ಕದಿಯಲು ಆಟಿಕೆ ಅಂಗಡಿಯ ಗೋಡೆಯನ್ನು ಭೇದಿಸಿದ್ದಾರೆ.
ಪೊಲೀಸರ ಪ್ರಕಾರ, ಪಶ್ಚಿಮ ಪಟ್ಟಣವಾದ ಲಿಪ್‌ಸ್ಟಾಡ್‌ನಲ್ಲಿ ವಾರಾಂತ್ಯದಲ್ಲಿ ದರೋಡೆ ಮಾಡಲಾಗಿದೆ. ಕಳ್ಳರು ಸುಮಾರು 100 ಲೆಗೊ ಕಂಟೈನರ್‌ಗಳನ್ನು ಕದ್ದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರು ತಮ್ಮೊಂದಿಗೆ ಲೆಗೊ ಸೆಟ್‌ಗಳಿಗೆ ಸೂಚನಾ ಪುಸ್ತಕಗಳನ್ನು ಕೂಡ ಕದ್ದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ವರದಿ ಮಾಡಿದೆ. ಇನ್ನು ಈ ಕಳ್ಳತನಕ್ಕೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು 2021ರ ಸೆಪ್ಟೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ಹಂಚಿಕೊಂಡ ವೈರಲ್ ಕ್ಲಿಪ್‌ನಲ್ಲಿ, ಯುಎಸ್ ನಲ್ಲಿ ಕಳ್ಳರು ಹಗಲು ಹೊತ್ತಿನಲ್ಲೇ ದರೋಡೆ ಮಾಡಿದ್ದು ಎಲ್ಲರಿಗೂ ಆಶ್ಚರ್ಯ ತಂದಿತ್ತು. ಅಂಗಡಿಯ ಕೆಲಸಗಾರರು ನೋಡ ನೋಡುತ್ತಿದ್ದಂತೆಯೇ ಕಳ್ಳರು ಸರಕುಗಳನ್ನು ತುಂಬಿದ ಶಾಪಿಂಗ್ ಕಾರ್ಟ್‌ಗಳೊಂದಿಗೆ ಎಸ್ಕೇಪ್ ಆಗಿದ್ದರು.