
ಹಾಡಹಗಲೇ ಯುವತಿಯೊಬ್ಬರ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದ ಕಳ್ಳನಿಗೆ ಧೈರ್ಯಶಾಲಿ ವ್ಯಕ್ತಿಯೊಬ್ಬರು ತಕ್ಕ ಪಾಠ ಕಲಿಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋದಲ್ಲಿ, ಮಹಿಳೆಯೊಬ್ಬರನ್ನು ಪಾದಚಾರಿ ಮಾರ್ಗದಲ್ಲಿ ವ್ಯಕ್ತಿ ಹಿಂಬಾಲಿಸುತ್ತಿರುವುದು ಕಂಡುಬರುತ್ತದೆ. ಕಳ್ಳ ಆಕೆಯ ಮೇಲೆ ಎರಗಿ ಬಲವಂತವಾಗಿ ಅವರ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ.
ಆಕೆ ಪ್ರತಿರೋಧ ತೋರಿದಾಗ, ಆತ ಹಿಂಸಾತ್ಮಕವಾಗಿ ವರ್ತಿಸಿ, ಆಕೆಯನ್ನು ಹೊಡೆದು ರಸ್ತೆಯ ಮಧ್ಯಕ್ಕೆ ಎಳೆದುಕೊಂಡು ಹೋಗುತ್ತಾನೆ.
ಯಾರೂ ಸಹಾಯ ಮಾಡುವುದಿಲ್ಲ ಎಂದು ತೋರಿದಾಗ, ಧೈರ್ಯಶಾಲಿ ವ್ಯಕ್ತಿಯೊಬ್ಬರು ಓಡಿಬಂದು ಆಕ್ರಮಣಕಾರನನ್ನು ಎದುರಿಸುತ್ತಾರೆ. ತಕ್ಷಣವೇ, ಆತ ಪಂಚ್ ನೀಡಿದ್ದು, ಇದರಿಂದ ಕಳ್ಳ ತತ್ತರಿಸುತ್ತಾನೆ. ಗಾಯಗೊಂಡರೂ ಧೈರ್ಯಗುಂದದ ಮಹಿಳೆ ತನ್ನ ರಕ್ಷಕ ಕಳ್ಳನ ಮೇಲೆ ಹೊಡೆತಗಳ ಸುರಿಮಳೆಗೈಯುತ್ತಿದ್ದಂತೆ ಎದ್ದು ನಿಲ್ಲುತ್ತಾರೆ.
ಕ್ಷಣಾರ್ಧದಲ್ಲಿ ಪರಿಸ್ಥಿತಿ ಬದಲಾಗುತ್ತದೆ. ಆ ವ್ಯಕ್ತಿ ಕಳ್ಳನನ್ನು ನೆಲಕ್ಕೆ ಕೆಡವಿ, ಆತ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಮಾಡುತ್ತಾನೆ. ಈ ಮಧ್ಯಪ್ರವೇಶದಿಂದ ಪ್ರೇರಿತರಾದ ಪ್ರತ್ಯಕ್ಷದರ್ಶಿಗಳು ಸಹಾಯ ಮಾಡಲು ಮುಂದಾಗಿ ಕಳ್ಳನನ್ನು ಥಳಿಸುತ್ತಾರೆ. ‘ಐ ಫಾರ್ ಆನ್ ಐ ಜಸ್ಟೀಸ್’ ಎಂಬ ಖಾತೆಯಿಂದ ಈ ವೈರಲ್ ವಿಡಿಯೋವನ್ನು ‘ಎಕ್ಸ್’ ನಲ್ಲಿ ಹಂಚಿಕೊಳ್ಳಲಾಗಿದೆ.
— Eye for an eye justice (@DivineJustici) January 29, 2025