alex Certify ಹುರಿದ ಶೇಂಗಾ ಅಥವಾ ಹಸಿ ಕಡಲೆಕಾಯಿ, ಆರೋಗ್ಯಕ್ಕೆ ಯಾವುದು ಬೆಸ್ಟ್‌…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುರಿದ ಶೇಂಗಾ ಅಥವಾ ಹಸಿ ಕಡಲೆಕಾಯಿ, ಆರೋಗ್ಯಕ್ಕೆ ಯಾವುದು ಬೆಸ್ಟ್‌…..?

ಬಡವರ ಬಾದಾಮಿಯೆಂದೇ ಕರೆಯಲ್ಪಡುವ ಕಡಲೆಕಾಯಿಯಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಕಡಲೆಕಾಯಿಯಲ್ಲಿ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳು ಸಮೃದ್ಧವಾಗಿವೆ. ಅದರಲ್ಲೂ ಚಳಿಗಾಲದಲ್ಲಿ ಹುರಿದ ಕಡಲೆಕಾಯಿ ಬಹಳ ರುಚಿಕರವೆನಿಸುತ್ತದೆ. ಜಿಮ್ ಅಥವಾ ವರ್ಕೌಟ್ ಮಾಡುವವರು ಹಸಿ ಶೇಂಗಾ ಅಂದರೆ ನೆನೆಸಿದ ಕಡಲೆಕಾಯಿಯನ್ನು ತಿನ್ನುತ್ತಾರೆ.

ವೈದ್ಯರು ಕೂಡ ನೆನೆಸಿದ ಕಡಲೆಕಾಯಿಯನ್ನು ತಿನ್ನಲು ಸಲಹೆ ನೀಡುತ್ತಾರೆ. ಹಾಗಾದಲ್ಲಿ ಶೇಂಗಾವನ್ನು ಹುರಿದು ತಿಂದರೆ ಹೆಚ್ಚು ಪ್ರಯೋಜನಕಾರಿಯೇ ಅಥವಾ ಅದನ್ನು ನೆನೆಸಿ ತಿನ್ನಬೇಕೆ ಎಂಬ ಗೊಂದಲ ಅನೇಕರನ್ನು ಕಾಡಬಹುದು.

ಯಾವುದು ಬೆಸ್ಟ್‌?

ಕಡಲೆಕಾಯಿಯನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಅದು ಆರೋಗ್ಯಕರವಾಗಿರುತ್ತದೆ. ಪೀನಟ್‌ ಬಟರ್‌ ಅನ್ನು ಕೂಡ ಸೇವನೆ ಮಾಡಬಹುದು. ಅನೇಕರು ಉಪ್ಪು ಬೆರೆಸಿ ಹುರಿದ ಶೇಂಗಾವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದನ್ನು ಜಾಸ್ತಿ ತಿಂದರೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಏಕೆಂದರೆ ಇದರಲ್ಲಿ ಉಪ್ಪಿನಂಶ ಹೆಚ್ಚಿರುತ್ತದೆ.

ಹಸಿ ಕಡಲೆಕಾಯಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೇಹದ ಜೀವಕೋಶಗಳನ್ನು ಬಾಹ್ಯ ಕೊಳೆಯಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲ ಕ್ಯಾಲೋರಿ, ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು ಮತ್ತು ಫೈಬರ್ ಕೂಡ ಇದರಲ್ಲಿ ಸಮೃದ್ಧವಾಗಿದೆ. ಹಸಿ ಕಡಲೆಕಾಯಿಯಲ್ಲಿ ಸೋಡಿಯಂ ಪ್ರಮಾಣವು ಕಡಿಮೆ ಇರುತ್ತದೆ. ಜೊತೆಗೆ ಇದು ಕೊಲೆಸ್ಟ್ರಾಲ್ ಮುಕ್ತವಾಗಿದೆ.

ಕಾರ್ಬ್ ಕಡಿಮೆ ಇರುವುದರಿಂದ ಹಸಿ ಕಡಲೆಕಾಯಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಹೆಚ್ಚಿನ ಕೊಬ್ಬಿನ ಕ್ಯಾಲೊರಿಗಳನ್ನು ಹೊಂದಿರುವುದರಿಂದ ಇತರ ಆಹಾರ ಪದಾರ್ಥಗಳೊಂದಿಗೆ ಸೇವಿಸಬೇಕು.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ ಎಣ್ಣೆಯಲ್ಲಿ ಹುರಿದ ಉಪ್ಪುರಹಿತ ಕಡಲೆಕಾಯಿಗಳು ಕೂಡ ಹೃದಯಕ್ಕೆ ಉತ್ತಮ. ಅವುಗಳಲ್ಲಿ ಹೆಚ್ಚು ಸೋಡಿಯಂ ಇರುವುದಿಲ್ಲ. ಎಣ್ಣೆಯಲ್ಲಿ ಕರಿಯುವುದರಿಂದ ಅದರಲ್ಲಿ ಕಂಡುಬರುವ ಕೊಬ್ಬಿನ ಪ್ರಮಾಣ ಹೆಚ್ಚಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...