ದೊಡ್ಡ ಬೆಕ್ಕುಗಳೇ ಹಾಗೆ! ರಾಜ ಗಾಂಭೀರ್ಯ ಹಾಗೂ ಗತ್ತಿನ ಪ್ರತೀಕದಂತೆ ಕಾಣುವ ದೊಡ್ಡ ಬೆಕ್ಕುಗಳನ್ನು ಅರಣ್ಯದಲ್ಲಿ ನೋಡುವುದೇ ಚಂದ.
ದೊಡ್ಡ ಬೆಕ್ಕುಗಳ ದೊಡ್ಡ ಬೆಕ್ಕಾದ ಹುಲಿಯನ್ನು ಅದರ ಸ್ವಚ್ಛಂದ ಪರಿಸರದಲ್ಲಿ ನೋಡುವುದಂತೂ ಭಾರೀ ಅಪರೂಪದ ಅನುಭವ. ಉತ್ತರ ಪ್ರದೇಶದ ಕತಾರ್ನಿಯಾಘಾಟ್ ವನ್ಯಜೀವಿ ಸಂರಕ್ಷಿತಾರಣ್ಯದಲ್ಲಿ ಹುಲಿಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ನೀರು ಕುಡಿಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವನ್ ಶೇರ್ ಮಾಡಿದ್ದಾರೆ.
ದಾಹ ತೀರಿಸಿಕೊಳ್ಳುತ್ತಿರುವ ಹುಲಿ ನೀರು ಕುಡಿದು ಮುಂದೆ ಸಾಗುವವರೆಗೂ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
“ರೋಡ್ ಸ್ಟಾಪರ್!! ಕತಾರ್ನಿಯಾಘಾಟ್ ವನ್ಯಜೀವಿ ಸಂರಕ್ಷಿತಾರಣ್ಯದಿಂದ,” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.