
ಇನ್ನೋವಾ ಕಾರು ಸಿದ್ಧಿಪೇಟೆಯಿಂದ ಹೈದರಾಬಾದಿಗೆ ತೆರಳುತ್ತಿದ್ದು, ಟರ್ಕಪಲ್ಲಿ ಬಳಿ ನಿಯಂತ್ರಣ ತಪ್ಪಿದ ಕಾರು ಮೊದಲಿಗೆ ಬೈಕಿಗೆ ಡಿಕ್ಕಿ ಹೊಡೆದು, ನಂತರ ಡಿವೈಡರ್ ನುಗ್ಗಿ ಬಸ್ಸಿಗೆ ಬಲವಾಗಿ ಗುದ್ದಿದೆ, ಇದರ ಪರಿಣಾಮ ಟೆಕ್ಕಿಗಳಾದ 25 ವರ್ಷದ ಮೋಹನ್ ಹಾಗೂ 23 ವರ್ಷದ ದೀಪಿಕಾ ಸಾವನ್ನಪ್ಪಿದ್ದಾರೆ.
ಇನ್ನು ಅಪಘಾತದಿಂದ ಬೈಕಿನಲ್ಲಿದ್ದ ಇಬ್ಬರು ಸವಾರರು ಸಹ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಭೀಕರ ಅಪಘಾತದ ದೃಶ್ಯ ಆ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮ್ ನಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ.