
ಚಾಮರಾಜನಗರ: ನೀರಿನಲ್ಲಿ ಯೋಗ ಮಾಡುತ್ತಲೇ ಯೋಗಪಟು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ದಾಸನಪುರ ಸಮೀಪ ಕಾವೇರಿ ನದಿಯಲ್ಲಿ ಘಟನೆ ನಡೆದಿದೆ.
ಕೊಳ್ಳೇಗಾಲದ ಯೋಗಪಟು ನಾಗರಾಜು(78) ಮೃತಪಟ್ಟವರು ಎನ್ನಲಾಗಿದೆ. ತೀರ್ಥ ಸ್ನಾನ ಮಾಡಲೆಂದು ಅವರು ನದಿಗೆ ಇಳಿದಿದ್ದರು. ನದಿಯಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದ ನಾಗರಾಜು ಎಷ್ಟು ಹೊತ್ತಾದರೂ ತೇಲುವ ಸ್ಥಿತಿಯಲ್ಲಿಯೇ ಇದ್ದರು. ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೊಳ್ಳೆಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.