
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರವಾಹದ ಹೊಡೆತಕ್ಕೆ ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ವಿವಿಧ ಅವಶೇಷಗಳಿಂದ ಕೂಡಿದ ಸೇತುವೆಯೊಂದು ಕೊಚ್ಚಿಕೊಂಡು ಬಂದಿದೆ. ಭಾರತೀಯ ಅರಣ್ಯಾಧಿಕಾರಿ ಪರ್ವಿನ್ ಕಸ್ವಾನ್ ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ.
ಪರ್ವೀನ್ ಕಸ್ವಾನ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಅವಶೇಷಗಳಿಂದ ತುಂಬಿದ ಸೇತುವೆಯನ್ನು ಕಾಣಬಹುದಾಗಿದೆ. ಪ್ರವಾಹಕ್ಕೆ ಒಳಗಾದ ನದಿಯಿಂದ ಇದು ಕೊಚ್ಚಿಕೊಂಡು ಬಂದಿರುವಂತೆ ಕಾಣುತ್ತಿದೆ. ಪ್ರಕೃತಿ – 1 ಮನುಷ್ಯ – 0. ನಾವು ಎಸೆದ ಕಸವನ್ನು ನದಿಯು ನಮಗೆ ಮರಳಿ ನೀಡಿದೆ. ನಾವು ಏನು ಕೊಡುತ್ತೇವೆಯೋ ಅದನ್ನೇ ಪಡೆಯುತ್ತೇವೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಇನ್ನು ಕೆಲವರು ಈ ವಿಡಿಯೋ ಹಳೆಯದು ಎಂದು ಸಹ ಪ್ರತಿಪಾದಿಸಿದ್ದಾರೆ. ಅದೇನೆ ಇರ್ಲಿ ಪ್ರಕೃತಿಯ ಮುಂದೆ ಮನುಷ್ಯ ತಾನೇ ದೊಡ್ಡವ ಎಂದು ಮೆರೆದಾಡುತ್ತಾನೆ. ಆದರೆ ಪ್ರಕೃತಿಯು ತಿರುಗಿ ನಿಂತರೆ ಮಾನವ ಅದರ ಮುಂದೆ ಶೂನ್ಯ ಅನ್ನೋದು ಅಷ್ಟೇ ಸತ್ಯ.