ಕಾರವಾರ: ಕಡವಿನಕಟ್ಟೆ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಕಡವಿನಕಟ್ಟೆ ಹೊಳೆಯಲ್ಲಿ ಘಟನೆ ನಡೆದಿದೆ.
ಸೂರಜ್ ನಾಯಕ(15), ಪಾರ್ವತಿ ಶಂಕರ ನಾಯಕ(35) ಮೃತಪಟ್ಟವರು. ಮೃತ ಇಬ್ಬರೂ ಭಟ್ಕಳ ತಾಲೂಕಿನ ಕಂಡೆಕೊಡಲು ನಿವಾಸಿಗಳಾಗಿದ್ದಾರೆ. 15ಕ್ಕೂ ಹೆಚ್ಚು ಜನ ಹೊಳೆಯಲ್ಲಿ ಸ್ನಾನ ಮಾಡಲು ಹೋದಾಗ ದುರಂತ ಸಂಭವಿಸಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.