ದಾವಣಗೆರೆ: ಉಕ್ಕಡಗಾತ್ರಿ ಬಳಿ ಇಬ್ಬರು ಸಹೋದರಿಯರು ನೀರುಪಾಲಾಗಿದ್ದಾರೆ. ನದಿಯಲ್ಲಿ ಸ್ನಾನಕ್ಕೆ ಇಳಿದಾಗ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ಬಳಿ ನದಿಯಲ್ಲಿ ಸ್ನಾನ ಮಾಡುವಾಗ ಘಟನೆ ನಡೆದಿದೆ. ಚೈತ್ರಾ(19), ಪುಷ್ಪಾ(17) ನೀರುಪಾಲಾದ ಸಹೋದರಿಯರು ಎಂದು ಹೇಳಲಾಗಿದೆ. ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿಯ ನಿವಾಸಿಗಳಾಗಿದ್ದ ಇವರು ತುಂಗಾ ಭದ್ರಾ ನದಿಯಲ್ಲಿ ನೀರು ಪಾಲಾಗಿದ್ದು, ಸ್ಥಳೀಯರಿಂದ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.