ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಕೋವಿಶೀಲ್ಡ್ ಕೊರೋನಾ ಲಸಿಕೆ ಬಳಕೆಗೆ ಅನುಮತಿ ನೀಡಿದೆ. ಈ ಲಸಿಕೆ ಜನರಿಗೆ 1000 ರೂ.ಗೆ ಮಾರಾಟವಾಗಲಿದ್ದು, ಸರ್ಕಾರಕ್ಕೆ 200 ರೂಪಾಯಿ ದರ ನಿಗದಿ ಮಾಡಲಾಗಿದೆ.
ಖಾಸಗಿಯಾಗಿ ಜನರಿಗೆ 1000 ರೂಪಾಯಿಗೆ ಲಸಿಕೆ ನೀಡಲಾಗುವುದು ಎಂದು ಪುಣೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದಾರ್ ಪೂನಾವಾಲಾ ತಿಳಿಸಿದ್ದಾರೆ.
ಲಸಿಕೆಯ ತುರ್ತು ಬಳಕೆಗೆ ಅನುಮತಿ ದೊರೆತ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 7 ರಿಂದ 10 ದಿನಗಳಲ್ಲಿ ಲಸಿಕೆ ವಿತರಣೆಗೆ ನೀಡಲಾಗುವುದು. 5 ಕೋಟಿ ಲಸಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತಿ ನಿಮಿಷಕ್ಕೆ 5000 ಡೋಸ್ ಲಸಿಕೆ ಸಿದ್ಧಪಡಿಸುವ ಸಾಮರ್ಥ್ಯವನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೊಂದಿದೆ. ಮಾರ್ಚ್ ವೇಳೆಗೆ ಸುಮಾರು 10 ಕೋಟಿ ಲಸಿಕೆ ತಯಾರಿಸುವ ಗುರಿಹೊಂದಲಾಗಿದೆ. ಜನರಿಗೆ ಖಾಸಗಿಯಾಗಿ 1000 ರೂ.ಗೆ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.