ಬೆಂಗಳೂರು: ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯದಲ್ಲಿರುವ ಗುತ್ತಿಗೆ ನೌಕರರಿಗೆ ಮಾಸಿಕ ರಿಸ್ಕ್ ಭತ್ಯೆ ಘೋಷಿಸಲಾಗಿದೆ.
ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಲ್ಲಿನ 922 ಗುತ್ತಿಗೆ ನೌಕರರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾಸಿಕ ಅಪಾಯ ಭತ್ಯೆಯನ್ನು ಘೋಷಿಸಿದೆ.
ಸಂಶೋಧನಾ ವಿಜ್ಞಾನಿ, ಸಂಶೋಧನಾ ಸಹಾಯಕರು, ಲ್ಯಾಬ್ ತಂತ್ರಜ್ಞರು, ಡೇಟಾ ಎಂಟ್ರಿ ಆಪರೇಟರುಗಳಿಗೆ 5,000 ರೂ., ದಾದಿಯರಿಗೆ 8,000 ರೂ. ಮತ್ತು ಡಿ ಗ್ರೂಪ್ ನೌಕರರಿಗೆ 10,000 ರೂ. ಅಪಾಯ ಭತ್ಯೆ ಘೋಷಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.