ಜಗತ್ತಿನೆಲ್ಲೆಡೆ ಆಹಾರ ಪದಾರ್ಥಗಳ ಬೆಲೆಗಳು ಕೈಗೆಟುಕದ ಮಟ್ಟಕ್ಕೆ ಹೋಗುತ್ತಿರುವುದು ನಿಜಕ್ಕೂ ಕಳವಳದ ವಿಷಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ.
ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಪೂರೈಕೆ ಕೊಂಡಿಯಲ್ಲಿ ವ್ಯತ್ಯಯವಾಗಿ, ಸಾರಿಗೆ ವೆಚ್ಚಗಳಲ್ಲಿ ಏರಿಕೆ ಕಂಡುಬಂದ ಕಾರಣ 2020ಕ್ಕೆ ಹೋಲಿಕೆ ಮಾಡಿದಲ್ಲಿ 2021ರಲ್ಲಿ ಆಹಾರ ಪದಾರ್ಥಗಳ ಬೆಲೆಗಳು 25%ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಎಂಎಫ್ ಇದೇ ವೇಳೆ ತಿಳಿಸಿದ್ದು, ಈ ಹಣದುಬ್ಬರವು ವರ್ಷಾಂತ್ಯದ ವೇಳೆಗೆ ಸಹಜ ಸ್ಥಿತಿಯತ್ತ ಬರಲಿದೆ ಎಂದಿದೆ.
ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಹರಿತವಾದ ಏರಿಕೆ ಕಂಡುಬಂದಿದ್ದು, ಇದರಿಂದಾಗಿ ದೇಶೀ ಮಾರುಕಟ್ಟೆಗಳಲ್ಲೂ ಸಹ ಬೆಲೆಗಳು ಏರಿಕೆಯಾಗಿ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಈ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದಾರೆ.