ಕಮಂಡಲದ ಹೆಸರು ನೀವು ಕೇಳಿರಬಹುದು. ನೋಡಿರಲೂಬಹುದು. ಪ್ರಾಚೀನ ಋಷಿಮುನಿಗಳ ಬಳಿ, ದತ್ತಾತ್ರೇಯ, ಬ್ರಹ್ಮದೇವರ ಚಿತ್ರವನ್ನು ಗಮನಿಸಿದಾಗ ನಿಮಗೆ ಕಮಂಡಲದ ದರ್ಶನವಾಗಿರಬಹುದು. ಈ ಕಮಂಡಲದ ಉಪಯೋಗ ಏನು? ಯಾವಾಗ ಇದು ಬಳಕೆಯಾಗ್ತಾ ಇತ್ತು ಗೊತ್ತಾ?
ಋಷಿಮುನಿಗಳು ಧ್ಯಾನದ ಹೊರತು, ಸದಾ ಸಂಚಾರ ನಿರತರಾಗಿ ಒಂದೆಡೆಯಿಂದ ಮತ್ತೊಂದಡೆಗೆ ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಓಡಾಡುತ್ತಿದ್ದರು. ಅವರ ಬದುಕು ಬಹಳ ಸರಳ. ಕಾಡಿನ ಹಣ್ಣು ಹಂಪಲು, ಗೆಡ್ಡೆ ಗೆಣಸು ಅವರ ಆಹಾರ. ಇನ್ನೂ ಈ ದೂರದ ಪ್ರಯಾಣದಲ್ಲಿ ಅವರ ನೆರವಿಗೆ ಇದ್ದದ್ದೇ ಈ ಕಮಂಡಲದ ನೀರು. ತಿನ್ನಲು ಏನೂ ಸಿಗದೆ ಇದ್ದಾಗ ಈ ಕಮಂಡಲದ ನೀರಿನ ಸೇವನೆ. ಇದರಲ್ಲಿರುವ ನೀರು ಅತ್ಯಂತ ಪವಿತ್ರ ಎಂಬ ನಂಬಿಕೆ ಇದೆ. ಬಹಳ ದಿನಗಳವರೆಗೂ ಇದರಲ್ಲಿರುವ ನೀರು ಕೆಡದೇ ಇರುತ್ತಿತ್ತು. ಋಷಿ ಮುನಿಗಳ ಕೋಪಕ್ಕೆ ತುತ್ತದಾದವರೂ ಇದೆ ಕಮಂಡಲದ ನೀರಿನಿಂದಲೇ ಶಾಪ ಪಡೆಯುತ್ತಿದ್ದಿದ್ದು.
ಹಿಂದೆ ನೀರನ್ನು ಸಂಗ್ರಹಿಸಿ, ಅದನ್ನು ಒಂದೆಡೆಯಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗಲು ಕಮಂಡಲಕ್ಕಿಂತ ಒಳ್ಳೆಯ ಸಾಧನೆ ಇರಲಿಲ್ಲ. ಹಾಗಾಗಿ ಇದನ್ನು ಪುರಾಣದ ವಾಟರ್ ಬಾಟಲ್ ಅಂತಲೇ ಹೇಳಬಹುದು.