alex Certify ಈ ಸ್ಥಳಕ್ಕೆ ಭೇಟಿ ನೀಡಿ ಸೋಂಕು ತಗುಲಿಸಿಕೊಂಡ್ರಾ ರಿಷಬ್​ ಪಂತ್​..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸ್ಥಳಕ್ಕೆ ಭೇಟಿ ನೀಡಿ ಸೋಂಕು ತಗುಲಿಸಿಕೊಂಡ್ರಾ ರಿಷಬ್​ ಪಂತ್​..?

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳಿದ್ದ ಟೀಂ ಇಂಡಿಯಾ ಆಟಗಾರರ ಪೈಕಿ ರಿಷಬ್​ ಪಂತ್​ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 20 ದಿನಗಳ ವಿರಾಮದ ಬಳಿಕ ನಡೆಸಲಾದ ಪರೀಕ್ಷೆಯಲ್ಲಿ ಪಂತ್​ಗೆ ಕೊರೊನಾ ಸೋಂಕು ದೃಢವಾಗಿದೆ.‌ ಇದರ ಜೊತೆಯಲ್ಲಿ ತಂಡದ ಥ್ರೋಡೌನ್​ ತಜ್ಞ ದಯಾನಂದ ಗರಾನಿ ಕೂಡ ಕೋವಿಡ್​ ಸೋಂಕಿತರಾಗಿದ್ದಾರೆ.

ರಿಷಬ್​ ಪಂತ್​ರಿಗೆ ಕೊರೊನಾ ಸೋಂಕು ಹೇಗೆ ತಗುಲಿದೆ ಅನ್ನೋದು ನಿಖರವಾಗಿ ಖಚಿತವಾಗಿಲ್ಲವಾದರೂ ಸಹ ಪಂತ್​​ ಇತ್ತೀಚಿಗೆ ದಂತ ವೈದ್ಯಕೀಯ ಕ್ಲಿನಿಕ್​​​​ಗೆ ಭೇಟಿ ನೀಡಿದ್ದರು. ಹೀಗಾಗಿ ಇಲ್ಲಿಂದಲೇ  ಪಂತ್​ಗೆ ಕೋವಿಡ್​ ಬಂದಿರಬಹುದೇ ಎಂಬ ಸಂದೇಹ ಶುರುವಾಗಿದೆ.

ಟೀಂ ಇಂಡಿಯಾದ ವಿಕೆಟ್​ ಕೀಪರ್​ ಪಂತ್​ ಜುಲೈ 8ರಂದು ಕೊರೊನಾ ಪಾಸಿಟಿವ್​ ವರದಿ ಪಡೆದ ಬಳಿಕ ಕಳೆದ 8 ದಿನಗಳಿಂದ ಪ್ರತ್ಯೇಕವಾಗಿ ಇದ್ದಾರೆ. ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಲಂಡನ್​ ದಂತವೈದ್ಯರ ಆಸ್ಪತ್ರೆಗೆ ಪಂತ್​ ಜುಲೈ 05 ಹಾಗೂ 06ರಂದು ಭೇಟಿ ನೀಡಿದ್ದರು. ಬಹುಶಃ ಈ ಸ್ಥಳದಿಂದಲೇ ಸೋಂಕು ತಗುಲಿರುವ ಶಂಕೆ ಇದೆ.
ಜುಲೈ 07ರಂದು ಪಂತ್​ ಸೇರಿದಂತೆ ಟೀಂ ಇಂಡಿಯಾದ ಇತರೆ ಆಟಗಾರರು ಹಾಗೂ ಅವರೊಂದಿಗಿರುವ ಕುಟುಂಬಸ್ಥರು ಲಂಡನ್​ನಲ್ಲಿಯೇ ಕೊರೊನಾ ಲಸಿಕೆಯ 2ನೇ ಡೋಸ್​ ಸ್ವೀಕರಿಸಿದ್ದರು. ಇದಾಗಿ ಒಂದೇ ದಿನದ ಬಳಿಕ ಪಂತ್​ ಸೋಂಕಿಗೆ ತುತ್ತಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಜೂನ್​ 29ರಂದು ಪಂತ್​​ ಯುರೋ 2020 ಪಂದ್ಯಾವಳಿ ವೀಕ್ಷಣೆಗಾಗಿ ವೆಂಬ್ಲೆ ಸ್ಟೇಡಿಯಂಗೂ ಭೇಟಿ ನೀಡಿದ್ದರು. ಹೀಗಾಗಿ ಇಲ್ಲಿಂದ ಏನಾದರೂ ಸೋಂಕು ತಗುಲಿಸಿಕೊಂಡರಾ ಎಂಬ ಪ್ರಶ್ನೆ ಕೂಡ ಮೂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...