ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದೊಂದಿಗೆ ಲಂಡನ್ನಲ್ಲಿರುವ ವಿಕೆಟ್ ಕೀಪರ್ ರಿಶಭ್ ಪಂತ್ ತಮ್ಮ ಸ್ನೇಹಿತರೊಂದಿಗೆ ಇಲ್ಲಿನ ಐತಿಹಾಸಿಕ ವೆಂಬ್ಲಿ ಕ್ರೀಡಾಂಗಣದಲ್ಲಿ ಯೂರೋ 2020 ಪಂದ್ಯವೊಂದನ್ನು ವೀಕ್ಷಿಸಿದ್ದಾರೆ.
ಇಂಗ್ಲೆಂಡ್ ಹಾಗೂ ಜರ್ಮನಿ ನಡುವಿನ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಪಂತ್, ಪೆವಿಲಿಯನ್ನಿಂದ ತಮ್ಮ ಸ್ನೇಹಿತರೊಂದಿಗೆ ಫೋಟೋವೊಂದನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಚಿತ್ರದಲ್ಲಿ ಪಂತ್ ಮಾಸ್ಕ್ ಧರಿಸದೇ ಇರುವುದಲ್ಲದೇ ಸಾಮಾಜಿಕ ಅಂತರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು, ಆ ವಿಚಾರದ ಬಗ್ಗೆ ನೆಟ್ಟಿಗರು ಕಾಮೆಂಟ್ ಮೂಲಕ ಚುಚ್ಚಿದ್ದಾರೆ. ಕೋವಿಡ್ ಸಾಂಕ್ರಮಿಕದ ನಿರ್ಬಂಧಗಳು ಸೆಲೆಬ್ರಿಟಿಗಳಿಗೆ ಅನ್ವಯಿಸುವುದಿಲ್ಲವೇ ಎಂದು ಖಡಕ್ಕಾಗಿ ಪ್ರಶ್ನಿಸುವ ಕಾಮೆಂಟ್ಗಳು ಪಂತ್ರ ಪೋಸ್ಟ್ಗೆ ಬಂದಿವೆ.