ಆರು ಅಡಿ ಹತ್ತು ಇಂಚು ಎತ್ತರ ಹೊಂದಿದ್ದ ವಿಶ್ವದ ಅತೀ ಎತ್ತರದ ಕುದುರೆಯು ವಿಸ್ಕಾನ್ಸಿನ್ನಲ್ಲಿ ಕೊನೆಯುಸಿರೆಳೆದಿದೆ. 1136 ಕೆಜಿ ತೂಕದ ಈ ಬಿಗ್ ಜೇಕ್ಗೆ 20 ವರ್ಷ ವಯಸ್ಸಾಗಿತ್ತು.
20 ವರ್ಷದ ಬೆಲ್ಜಿಯಂ ಕುದುರೆಯು ಪೊರೆನೆಟ್ನ ಸ್ಮೋಕಿ ಹಾಲೋ ಫಾರ್ಮ್ನಲ್ಲಿ ಜೆರ್ರಿ ಗಿಲ್ಬರ್ಟ್ ಮತ್ತವರ ಪತ್ನಿ ವ್ಯಾಲಿಷಿಯಾ ಗಿಲ್ಬರ್ಟ್ ಜೊತೆ ವಾಸವಾಗಿತ್ತು.
ಇನ್ನು ಕುದುರೆ ಸಾವನ್ನಪ್ಪಿದ ಬಗ್ಗೆ ಮಾತನಾಡಿದ ವ್ಯಾಲಿಷಿಯಾ, ಬಿಗ್ ಜೇಕ್ 2 ವಾರಗಳ ಹಿಂದೆ ಸಾವನ್ನಪ್ಪಿದೆ. ನಾವು ಕುದುರೆ ಸಾವಿನ ನಿಖರವಾದ ದಿನಾಂಕವನ್ನ ಹಂಚಿಕೊಂಡಿಲ್ಲ. ಕೇವಲ ಅದೊಂದು ದಿನಾಂಕದಂದು ಕುದುರೆಯನ್ನ ಸ್ಮರಿಸೋದು ಬೇಡ. ನಮ್ಮ ಕುಟುಂಬಕ್ಕೆ ಇದೊಂದು ಅತ್ಯಂತ ಆಘಾತಕಾರಿ ಘಟನೆ ಎಂದು ಹೇಳಿದ್ದಾರೆ.
2010ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ವಿಶ್ವದ ಅತೀ ಎತ್ತರದ ಕುದುರೆ ಎಂಬ ದಾಖಲೆಯನ್ನ ಬಿಗ್ ಜೇಕ್ ನಿರ್ಮಿಸಿತ್ತು. ಆಗ ಜೇಕ್ಗೆ ಕೇವಲ 9 ವರ್ಷ ವಯಸ್ಸಾಗಿತ್ತು.