
ವಿರಾಟ್ ಕೊಹ್ಲಿಯನ್ನು ಭೇಟಿ ಮಾಡುವುದು ಯಾವುದೇ ಕ್ರಿಕೆಟ್ ಅಭಿಮಾನಿಗೆ ಕನಸಿನ ವಿಚಾರ. ಅದು ರಿಕಿ ಪಾಂಟಿಂಗ್ ಮಗನಿಗಾದರೂ ಅಷ್ಟೇ.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರನಾಗಿರುವ ರಿಕಿ ಪಾಂಟಿಂಗ್ ತಮ್ಮ ಪುತ್ರನನ್ನು ಕೊಹ್ಲಿಗೆ ಪರಿಚಯಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
“ಕೊಹ್ಲಿರನ್ನು ರಿಕಿ ಭೇಟಿ ಮಾಡುತ್ತಿರುವ ಮುಂದುವರೆದ ಭಾಗದಲ್ಲಿ ರಿಕಿ ಜೂನಿಯರ್,” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿದೆ.