alex Certify ಐದು ರೂ. ನಾಣ್ಯದ ಬದಲು ಯೂರೋ ಕೊಟ್ಟ ಆಟೋ ಚಾಲಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದು ರೂ. ನಾಣ್ಯದ ಬದಲು ಯೂರೋ ಕೊಟ್ಟ ಆಟೋ ಚಾಲಕ….!

ನವದೆಹಲಿ: ವಿಚಿತ್ರ ಘಟನೆಯೊಂದರಲ್ಲಿ, ಟ್ವಿಟ್ಟರ್ ಬಳಕೆದಾರರಾದ ಅನುಷ್ಕಾ ಎನ್ನುವವರು ದೆಹಲಿಯ ಆಟೋ ಡ್ರೈವರ್​ ಒಬ್ಬರಿಂದ ಭಾರತದ ನಾಣ್ಯದ ಬದಲಾಗಿ ಯೂರೋ ನಾಣ್ಯವನ್ನು ಪಡೆದುಕೊಂಡಿರುವ ಬಗ್ಗೆ ಬರೆದುಕೊಂಡಿದ್ದಾರೆ.

ಆಟೋ ಡ್ರೈವರ್​ ನನಗೆ ಐದು ರೂಪಾಯಿ ನಾಣ್ಯ ನೀಡಬೇಕಿತ್ತು. ಅದಕ್ಕೆ ಬದಲಾಗಿ ಒಂದು ಯುರೋ ನಾಣ್ಯ ಕೊಟ್ಟಿದ್ದು, ಅದನ್ನು ತಾವು ನಂತರದಲ್ಲಿ ಗಮನಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಇದು ತುಂಬಾ ವಿಚಿತ್ರವಾಗಿದೆ. ಆಟೋ ಡ್ರೈವರ್​ ತಿಳಿದು ಕೊಟ್ಟರೋ, ತಿಳಿಯದೇ ಕೊಟ್ಟರೋ ನನಗೆ ಗೊತ್ತಿಲ್ಲ. ನಾನು ಮೊದಲು ಅದನ್ನು ಗಮನಿಸಿರಲಿಲ್ಲ. ಐದು ರೂಪಾಯಿ ಕಾಯಿನ್​ ಇರಬಹುದು ಎಂದು ಪರ್ಸ್​ನಲ್ಲಿ ಹಾಕಿಕೊಂಡಿದ್ದೆ. ನಂತರ ನೋಡಿದಾಗ ಅದು ಯೂರೋ ಆಗಿತ್ತು ಎಂದಿದ್ದಾರೆ.

ಇವರ ಈ ಟ್ವೀಟ್​ಗೆ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇದೇ ದೇಶದ ವಿಕಾಸ ಎಂದು ಕೆಲವರು ಹೇಳಿದ್ದರೆ, ಇದು ‘ವಿಶ್ವಗುರು ನಡವಳಿಕೆ’ ಎಂದು ಇನ್ನು ಕೆಲವರು ಹೇಳಿದ್ದಾರೆ. ಒಬ್ಬಾಕೆ, ನಾನು ಕಳೆದ ತಿಂಗಳು ಭಾರತಕ್ಕೆ ಬಂದಿದ್ದಾಗ ಕೆಲವಷ್ಟು ಯೂರೋಗಳನ್ನು ಕಳೆದುಕೊಂಡಿದ್ದೆ. ಅದರಲ್ಲಿ ಒಂದು ಆಟೋ ಡ್ರೈವರ್​ಗೆ ಸಿಕ್ಕಿರಬೇಕು ಎಂದು ತಮಾಷೆಯಾಗಿ ಬರೆದಿದ್ದಾರೆ.

https://twitter.com/awolaxolotl/status/1626089156328947712?ref_src=twsrc%5Etfw%7Ctwcamp%5Etweetembed%7Ctwterm%5E1626089156328947712%7Ctwgr%5E9779740a485ebd5187e2a3b8db6ca69a9c5f4c83%7Ctwcon%5Es1_&ref_url=https%3A%2F%2Fwww.news18.com%2Fbuzz%2Frickshaw-driver-bamboozles-woman-with-one-euro-coin-instead-of-rs-5-desis-call-it-vikas-7098205.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...