ಅಕ್ಕಿ, ಭತ್ತ ವ್ಯಾಪಾರಿಗಳು ವೆಬ್ ಪೋರ್ಟಲ್‍ನಲ್ಲಿ ನೋಂದಣಿಯಾಗಿ ಅಕ್ಕಿ ದಾಸ್ತಾನು ವಿವರ ದಾಖಲಿಸಲು ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರವು ಅಕ್ಕಿ, ಭತ್ತದ ಘಟಕಗಳ ವ್ಯಾಪಾರಿಗಳು, ಸಗಟು ವ್ಯಾಪಾರಿ, ಚಿಲ್ಲರೆ ವ್ಯಾಪಾರಿ, ಬಿಗ್ ಚೈನ್ ರೀಟೇಲರ್, ಬ್ರೋಕನ್ ರೈಸ್, ನಾನ್-ಬಾಸ್ಮತಿ ವೈಟ್, ಪರ್ಬಾಯಿಲ್ಡ್, ಬಾಸ್ಮತಿ ಅಕ್ಕಿ ಹಾಗೂ ಭತ್ತ ದಾಸ್ತಾನು ಬಗ್ಗೆ ಕೇಂದ್ರ ಸರ್ಕಾರದ ವೆಬ್ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು. ಪ್ರತಿ ಶುಕ್ರವಾರ ಅಕ್ಕಿ, ಭತ್ತದ ದಾಸ್ತಾನನ್ನು ವೆಬ್ ಪೋರ್ಟಲ್ https://eve oils.nic.in/login.html ಮೂಲಕ ಘೋಷಿಸಿಕೊಳ್ಳಲು ತಿಳಿಸಲಾಗಿದೆ.
ನೋಂದಣಿ ಮತ್ತು ದಾಸ್ತಾನು ಘೋಷಣೆ ಸಂಬಂಧ ಸೃಷ್ಟೀಕರಣ, ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರದ ಇ-ಮೇಲ್ wheatstock-fpd@gov.in ಅನ್ನು ಸಂಪರ್ಕಿಸಲು ತಿಳಿಸಿದೆ.
ಜಿಲ್ಲಾ ಹಂತದಲ್ಲಿ ನೋಂದಣಿ ಮತ್ತು ದಾಸ್ತಾನು ಘೋಷಣೆಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ವಸಂತ್ ಕುಮಾರ್ ಎಸ್.ಜಿ. ದೂ.ಸಂ; 9986212164 ಗೆ ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸಿದ್ರಾಮ್ ಮರಿಹಾಳ್ ತಿಳಿಸಿದ್ದಾರೆ.