alex Certify ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಸಿಹಿ ಸುದ್ದಿ: 10 ಕೆಜಿ ಅಕ್ಕಿ ಸಿಗುವವರೆಗೂ ‘ಖಾತೆಗೆ ಹಣ’ ಜಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅನ್ನಭಾಗ್ಯ’ ಫಲಾನುಭವಿಗಳಿಗೆ ಸಿಹಿ ಸುದ್ದಿ: 10 ಕೆಜಿ ಅಕ್ಕಿ ಸಿಗುವವರೆಗೂ ‘ಖಾತೆಗೆ ಹಣ’ ಜಮಾ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ಖಾತೆಗೆ ಹಣ ಪಾವತಿಸಲಾಗುತ್ತಿದೆ. ಎಲ್ಲಿಯವರೆಗೂ ಅಕ್ಕಿ ಸಿಗುವುದಿಲ್ಲವೋ ಅಲ್ಲಿಯವರೆಗೂ ಖಾತೆಗೆ ಹಣ ಪಾವತಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಕಡಿಮೆ ದರ 10 ಕೆಜಿ ಅಕ್ಕಿ ಸಿಗುವವರೆಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶದಲ್ಲಿ ಅಕ್ಕಿ ದರ ಜಾಸ್ತಿ ಇದೆ. ನಾವು ಎಫ್.ಸಿ.ಐ.ಗೆ ಕೊಡುವ ದರಕ್ಕೆ ಕೇಳುತ್ತಿದ್ದೇವೆ. ಆದರೆ, ಅವರು ಆ ದರಕ್ಕೆ ಅಕ್ಕಿ ಕೊಡುತ್ತಿಲ್ಲ. ನಮ್ಮ ದರಕ್ಕೆ ಅಕ್ಕಿ ಸಿಗದ ಕಾರಣ 10 ಕೆಜಿ ಅಕ್ಕಿ ಸಿಗುವವರೆಗೆ 5 ಕೆಜಿ ಪಡಿತರ ವಿತರಿಸಿ ಖಾತೆಗೆ 5 ಕೆಜಿ ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...