
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಹಣದ ಬದಲು ಅಕ್ಕಿ ವಿತರಿಸುವ ಸಾಧ್ಯತೆ ಇದೆ. ಅಕ್ಕಿ ಪಡೆಯಲು ಆಹಾರ ಇಲಾಖೆ ಪ್ರಯತ್ನಿಸಿದ್ದು, ಇದೇ ಕಾರಣಕ್ಕೆ ಹಣದ ವರ್ಗಾವಣೆ ಸ್ಥಗಿತವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಹೆಚ್ಚುವರಿ ಅಕ್ಕಿ ಹಣ ಖಾತೆಗೆ ಜಮಾ ಮಾಡದಿರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಿಗದಿತ ಸಮಯಕ್ಕೆ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಪಡಿತರದ ಅಕ್ಕಿ ಹಣ ಜಮಾ ಮಾಡುತ್ತಿಲ್ಲ. ಕೆಲವು ತಿಂಗಳು ತಾಂತ್ರಿಕತೆಯ ಸಮಸ್ಯೆ ನೆಪವೊಡ್ಡಿ ವಿಳಂಬ ಆಗಿದೆ. ಇದೀಗ ಹಣದ ಬದಲಿಗೆ ಅಕ್ಕಿ ಕೊಡಲು ಚಿಂತನೆ ನಡೆದಿದೆ. ಆದರೆ ಅಕ್ಕಿ, ಹಣ ಎರಡು ಕೂಡ ಫಲಾನುಭವಿಗಳಿಗೆ ಸಿಗದೇ ತೊಂದರೆಯಾಗಿದೆ. ಇದನ್ನು ಮನಗಂಡು ಹೆಚ್ಚುವರಿ ಐದು ಕೆಜಿ ಅಕ್ಕಿಯನ್ನೇ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.