
ಬೆಂಗಳೂರು: ಹೆಚ್ಚುವರಿ 5 ಕೆಜಿ ಅಕ್ಕಿ ವಿಳಂಬವಾಗಲಿದೆ ಎಂಬುದರ ಬಗ್ಗೆ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಸುಳಿವು ನೀಡಿದ್ದಾರೆ.
ನಾವು ರೈತರಿಂದ ನೇರವಾಗಿ ಅಕ್ಕಿ ಖರೀದಿ ಮಾಡುವುದಿಲ್ಲ. ರೈತರಿಂದ ಖರೀದಿ ಮಾಡುವ ಪ್ರಶ್ನೆಯೇ ಸರ್ಕಾರದ ಮುಂದೆ ಇಲ್ಲ. ರೈಸ್ ಮಿಲ್ ಗಳ ಮೂಲಕ ಮಾತ್ರ ಅಕ್ಕಿ ಖರೀದಿ ಮಾಡುತ್ತೇವೆ. ಬೇರೆ ರಾಜ್ಯಗಳಿಂದಲೂ ಅಕ್ಕಿ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಅಕ್ಕಿ ಸಾಗಿಸುವ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಇವೆ. ಪ್ರತಿ ತಿಂಗಳು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಖರೀದಿ ಸುಲಭವಾಗಿಲ್ಲ. ಹೀಗಾಗಿ ಅಕ್ಕಿ ಖರೀದಿ ಪ್ರಕ್ರಿಯೆ ಇನ್ನಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಬೆಂಗಳೂರಿನಲ್ಲಿ ಮುನಿಯಪ್ಪ ಹೇಳಿದ್ದಾರೆ.