ಬೆಂಗಳೂರು: ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆ ನವಂಬರ್ ಗೆ ಅಂತ್ಯವಾಗಲಿದೆ. ಡಿಸೆಂಬರ್ ನಿಂದ ಕೇಂದ್ರದ ಉಚಿತ ಅಕ್ಕಿ-ಬೇಳೆ ಸಿಗುವುದಿಲ್ಲ.
ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಸಂಕಷ್ಟದಲ್ಲಿದ್ದ ಜನರಿಗೆ ಅನುಕೂಲವಾಗುವಂತೆ ಪಡಿತರ ವಿತರಿಸಲಾಗುತ್ತಿದೆ. 5 ಕೆಜಿ ಅಕ್ಕಿ, ಒಂದು ಕೆಜಿ ಕಡಲೆ ಕಾಳು ಹೆಚ್ಚುವರಿಯಾಗಿ ನೀಡುತ್ತಿದ್ದು, ಇನ್ನು ಮುಂದೆ ರಾಜ್ಯದ ಪಾಲಿನ 5 ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿ ಮಾತ್ರ ಲಭ್ಯವಾಗಲಿದೆ.
ಕಳೆದ 7 ತಿಂಗಳಿನಿಂದ ಪಡಿತರ ಚೀಟಿದಾರರಿಗೆ ಉಚಿತವಾಗಿ ನೀಡಲಾಗುತ್ತಿದ್ದ ಅಕ್ಕಿ, ಬೇಳೆಯನ್ನು ನವೆಂಬರ್ ಅಂತ್ಯಕ್ಕೆ ನಿಲ್ಲಿಸಲಿದ್ದು, ಡಿಸೆಂಬರ್ ನಿಂದ ರಾಜ್ಯದ ಪಾಲಿನ ಆಹಾರ ಧಾನ್ಯ ಮಾತ್ರ ಸಿಗಲಿದೆ. ಪಡಿತರ ಚೀಟಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ, ಕುಟುಂಬವೊಂದಕ್ಕೆ 2 ಕೆಜಿ ಗೋಧಿ, 1 ಕೆಜಿ ಕಡಲೆ ಕಾಳು ಸಿಗುತ್ತಿತ್ತು. ಕೇಂದ್ರದ ಆದೇಶದಂತೆ ಯೋಜನೆ ಅಂತ್ಯವಾಗಲಿದೆ.
ರಾಜ್ಯದ ಪಾಲಿನ ಅಕ್ಕಿ, ಗೋಧಿ ಮಾತ್ರ ಲಭ್ಯವಾಗಲಿದೆ. ಡಿಸೆಂಬರ್ ನಲ್ಲಿ ಅಂತ್ಯೋದಯ ಕಾರ್ಡ್ ದಾರರಿಗೆ ಕುಟುಂಬಕ್ಕೆ 30 ಕೆಜಿ ಅಕ್ಕಿ, 2 ಕೆಜಿ ಗೋಧಿ ನೀಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ, ಕುಟುಂಬಕ್ಕೆ 2 ಕೆಜಿ ಗೋಧಿ ನೀಡಲಾಗುವುದು ಎಂದು ಹೇಳಲಾಗಿದೆ.