ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ನೀಡುತ್ತಿದ್ದು, ಇದರ ಹೊರತಾಗಿ ರಾಜ್ಯ ಸರ್ಕಾರದ ಕಡೆಯಿಂದ 5 ಕೆಜಿ ಅಕ್ಕಿ ಬದಲಿಗೆ ಖಾತೆಗೆ ಅಕ್ಕಿಯ ಹಣ ಜಮಾ ಮಾಡಲಾಗುತ್ತದೆ.
ಜುಲೈ 10ರಂದು ಸೋಮವಾರ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ನೀಡಲು ಕಾರಣಾಂತರದಿಂದ ಸಾಧ್ಯವಾಗಿಲ್ಲ. ಹೀಗಾಗಿ ಅಕ್ಕಿಯ ಹಣವನ್ನು ಕಾರ್ಡ್ ಯಜಮಾನರ ಖಾತೆಗೆ ಜಮಾ ಮಾಡಲಾಗುತ್ತದೆ. ಜುಲೈ 10ರಂದು ಫಲಾನುಭವಿಗಳ ಸಮಾವೇಶ, ಸಂವಾದ ಏರ್ಪಡಿಸಿ ಏಕಕಾಲಕ್ಕೆ ಖಾತೆಗೆ ಅಕ್ಕಿ ಹಣ ಜಮಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.