ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಆರ್.ಐ. ನಟರಾಜ್ ಗೆ ಮತ್ತೊಂದು ಶಾಕ್ ಎದುರಾಗಿದೆ. ನಟರಾಜ್ ಅವರ ಮನೆಯ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗ್ಗೆ ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ನಟರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಆವಲಹಳ್ಳಿಯ ಗಿರಿನಗರದ ಮೂರು ಅಂತಸ್ತಿನ ಮನೆ ಮೇಲೆ ಲೋಕಾ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯಲ್ಲಿ 900 ಗ್ರಾಂ ಚಿನ್ನ, 7 ಕೆಜಿ ಬೆಳ್ಳಿ. 80,000 ರೂ. ನಗದು ಪತ್ತೆಯಾಗಿದೆ.
ಒಂದು ಇನೋವಾ ಕ್ರಿಸ್ಟಾ, ಒಂದು ಕಿಯಾ, ಒಂದು ಹುಂಡೈ ವರ್ಣ, ಒಂದು ಆಡಿ ಕ್ಯೂ3 ಕಾರ್ ಪತ್ತೆಯಾಗಿದ್ದು, ಕೊಡಿಗೇಹಳ್ಳಿಯಲ್ಲಿ ಅವರ ಪತ್ನಿ ಹೆಸರಲ್ಲಿ 40*60 ನಿವೇಶನದ ದಾಖಲೆ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ಕಾರ್ಯ ಮುಂದುವರೆದಿದೆ.