ಹರ್ಯಾಣದ ರೇವರಿಯಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. 10 ವರ್ಷದ ಬಾಲಕಿ ಮೇಲೆ ಐದು ಮಂದಿ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ ನಡೆದಿದೆ. ಘಟನೆ ಮೇ 24 ರಂದು ನಡೆದಿದ್ದು, ಇದ್ರ ವಿಡಿಯೋ ಈಗ ವೈರಲ್ ಆಗಿದೆ. ಪೀಡಿತೆ ತಂದೆ ಪೊಲೀಸರಿಗೆ ದೂರು ನೀಡಿದ್ದಾನೆ.
ಪೀಡಿತೆ ರಾಂಪುರ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯೊಂದರ ನಿವಾಸಿ. ಬಾಲಕಿ ಮನೆ ಪಕ್ಕದಲ್ಲಿರುವ ಶಾಲೆಯಲ್ಲಿ ಆಟವಾಡ್ತಿದ್ದಳು. ಅಲ್ಲಿಯೇ ಅಕ್ಕಪಕ್ಕದ ಮನೆ ಮಕ್ಕಳು ಆಟವಾಡ್ತಿದ್ದರು. ಬಾಲಕಿ ಮೇಲೆ ಆರು ಮಂದಿ ಸಾಮೂಹಿಕ ದೌರ್ಜನ್ಯವೆಸಗಿದ್ದಾರೆ. ಇದರಲ್ಲಿ ಒಬ್ಬ 18 ವರ್ಷದ ಯುವಕನಾದ್ರೆ ಉಳಿದವರ ವಯಸ್ಸು 8-14 ವರ್ಷದೊಳಗಿದೆ. ದೌರ್ಜನ್ಯದ ವಿಡಿಯೋ ಮಾಡಿ, ಅದನ್ನು ವಾಟ್ಸಾಪ್ ನಲ್ಲಿ ಪರಸ್ಪರ ಹಂಚಿಕೊಂಡಿದ್ದಾರೆ.
ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿಡಿಯೋ ತಂದೆ ಕೈಗೆ ಸಿಕ್ಕಿದೆ. ತಕ್ಷಣ ತಂದೆ ಪೊಲೀಸರಿಗೆ ದೂರು ನೀಡಿದ್ದಾನೆ. ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಯಸ್ಕನನ್ನು ಜೈಲಿಗೆ ಕಳುಹಿಸಲಾಗಿದೆ. ಯಾರ ಮೊಬೈಲ್ ನಿಂದ ಈ ವಿಡಿಯೋ ವೈರಲ್ ಆಗಿದೆ ಎಂಬುದರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.