
ಬೆಂಗಳೂರು: ಉದ್ಘೋಷಿತ ಅಪರಾಧಿಗಳ ಸುಳಿವು ನೀಡಿದರೆ ಭಾರಿ ಮೊತ್ತ ಸಿಗಲಿದೆ. ಖಾಸಗಿ ಮಾಹಿತಿದಾರರಿಗೆ 5 ಲಕ್ಷ ರೂಪಾಯಿವರೆಗೆ ಬಹುಮಾನ ನೀಡಲಾಗುವುದು.
ಡಿಜಿ ಮತ್ತು ಐಜಿಪಿಗೆ ವಿಶೇಷ ಆರ್ಥಿಕ ವಿತ್ತಾಧಿಕಾರ ನೀಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಸುರಕ್ಷತೆ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಕರಣದ ತೀವ್ರತೆಯ ಆಧಾರದಲ್ಲಿ ಬಹುಮಾನದ ಹಣದ ಬಗ್ಗೆ ಡಿಜಿ, ಐಜಿಪಿ ನಿರ್ಧಾರ ಕೈಗೊಳ್ಳುವರು. 20,000 ರೂ.ನಿಂದ 5 ಲಕ್ಷ ರೂಪಾಯಿವರೆಗೆ ಬಹುಮಾನ ನೀಡಬಹುದು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಬಹುಮಾನ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.