![Revolvers of Mamata Banerjee's security guard goes missing while travelling from Assam to Kolkata - India News](https://akm-img-a-in.tosshub.com/indiatoday/images/story/202112/gun_reuters_1200x768.jpeg?JrN2cek9N9WV9BV97CXqdctsopxtq6Ho&size=1200:675)
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರತಾ ಸಿಬ್ಬಂದಿಗೆ ಸೇರಿದ ಎರಡು ರಿವಾಲ್ವರ್‌ಗಳು, ಸ್ವಲ್ಪ ಹಣ ಮತ್ತು ಮೊಬೈಲ್ ಫೋನ್ ಬುಧವಾರ ನಾಪತ್ತೆಯಾಗಿದೆ. ಸ್ಥಳೀಯ ಚುನಾವಣೆ ಗೆದ್ದ ಖುಷಿಯಲ್ಲಿ ಅಸ್ಸಾಂಗೆ ಭೇಟಿ ನೀಡಿ ವಾಪಾಸ್ ಬರುವ ವೇಳೆ ಈ ಘಟನೆ ಸಂಭವಿಸಿದೆ.
ಮಮತಾ ಬ್ಯಾನರ್ಜಿ ಅವರು ಮಂಗಳವಾರ ಮಧ್ಯಾಹ್ನ ಅಸ್ಸಾಂನ ಗೌಹಾಟಿಗೆ ಆಗಮಿಸಿದ್ದರು. ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಕೋಲ್ಕತ್ತಾದ ನಾಗರಿಕ ಚುನಾವಣೆಯಲ್ಲಿ ಜಯಗಳಿಸಿದೆ. ಈ ಸಲುವಾಗಿ ನಿಲಾಚಲ ಬೆಟ್ಟಗಳ ಮೇಲಿರುವ ದೇವಸ್ಥಾನಕ್ಕೆ ತೆರಳಿದ್ದ ದೀದಿಯನ್ನ ಅಲ್ಲಿನ ದೇವಾಲಯದಲ್ಲಿ ಸ್ವಾಗತ ಕೋರಿ ಆಶೀರ್ವದಿಸಲಾಗಿತ್ತು.
ಬಿಇಎಲ್‌ನಲ್ಲಿ ಖಾಲಿ ಇವೆ ಹುದ್ದೆಗಳು: ಇಲ್ಲಿದೆ ಅರ್ಜಿ ಸಲ್ಲಿಸುವ ವಿವರ
ಮಮತಾ ಬ್ಯಾನರ್ಜಿ ಅವರ ಈ ಭೇಟಿಯ ವೇಳೆ ಅವರ ರಕ್ಷಣೆಯ ಜವಾಬ್ದಾರಿಯನ್ನ 12 ಮಂದಿ ಭದ್ರತಾ ಸಿಬ್ಬಂದಿ ವಹಿಸಿಕೊಂಡಿದ್ದರು. ಮಮತಾ ಬ್ಯಾನರ್ಜಿ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸಲು ಕೇವಲ ಇಬ್ಬರು ಗಾರ್ಡ್‌ಗಳಿಗೆ ಮಾತ್ರ ಅವಕಾಶ ನೀಡಿದ್ದರಿಂದ, ಇನ್ನುಳಿದ ಸಿಬ್ಬಂದಿ ಅಸ್ಸಾಂನಿಂದ ಕೊಲ್ಕತ್ತಾಗೆ ರೈಲಿನಲ್ಲಿ ವಾಪಸ್ಸಾಗಿದ್ದಾರೆ. ಈ ಪ್ರಯಾಣದ ವೇಳೆ ಘಟನೆ ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಭದ್ರತಾ ಸಿಬ್ಬಂದಿಯೊಬ್ಬರ ಬ್ಯಾಗ್ ನಾಪತ್ತೆಯಾಗಿದೆ. ಬ್ಯಾಗ್‌ನಲ್ಲಿ ಎರಡು ರಿವಾಲ್ವರ್‌ಗಳು, ಸ್ವಲ್ಪ ಹಣ ಮತ್ತು ಮೊಬೈಲ್ ಫೋನ್ ಇತ್ತು ಎಂದು ವರದಿಯಾಗಿದೆ.