alex Certify ರಾಜ್ಯದಲ್ಲಿ ಇಂದಿನಿಂದ ಕ್ರಾಂತಿಕಾರಕ ಬದಲಾವಣೆಯ ಸಿವಿಲ್ ಪ್ರಕ್ರಿಯೆ ಸಂಹಿತೆ ಜಾರಿ: ಇನ್ನು ಬಡವರ ವ್ಯಾಜ್ಯ ಶೀಘ್ರ ಇತ್ಯರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಇಂದಿನಿಂದ ಕ್ರಾಂತಿಕಾರಕ ಬದಲಾವಣೆಯ ಸಿವಿಲ್ ಪ್ರಕ್ರಿಯೆ ಸಂಹಿತೆ ಜಾರಿ: ಇನ್ನು ಬಡವರ ವ್ಯಾಜ್ಯ ಶೀಘ್ರ ಇತ್ಯರ್ಥ

ಗದಗ: ಮಾರ್ಚ್ 4ರಿಂದ ರಾಜ್ಯದಲ್ಲಿ ಸಿವಿಲ್ ಪ್ರಕ್ರಿಯೆ ಸಂಹಿತೆ(ಕರ್ನಾಟಕ ತಿದ್ದುಪಡಿ) ಅಧಿನಿಯಮ 2023 ಜಾರಿಯಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ ತಿಳಿಸಿದ್ದಾರೆ.

ನ್ಯಾಯಾಲಯಗಳಲ್ಲಿ ಬಹುಕಾಲದಿಂದ ಬಾಕಿ ಉಳಿದ ಬಡವರು, ಸಣ್ಣ ಮತ್ತು ಅತಿ ಸಣ್ಣ ರೈತರ ಸಿವಿಲ್ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವ ಕಾನೂನು ಇದಾಗಿದೆ. ಸಿವಿಲ್ ಪ್ರಕ್ರಿಯೆ ಸಂಹಿತೆ ಕೇಂದ್ರ ಅಭಿನಯಮವನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ ತಿದ್ದುಪಡಿ ಮಾಡಿದ ಅಧಿನಿಯಮವಾಗಿದ್ದು, ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲರಾದವರ ವ್ಯಾಜ್ಯಗಳು ಇನ್ನು ಮುಂದೆ ಆರು ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥವಾಗಲಿವೆ.

ಅಧಿನಿಯಮ ಜಾರಿಯಾದ ಬಳಿಕ ದಾಖಲಾಗುವ ಪ್ರಕರಣಗಳನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲು ಆದ್ಯತೆ ಮೇರೆಗೆ ಕೋರ್ಟ್ ಗಳು ವಿಚಾರಣೆ ನಡೆಸಬೇಕು. ಈಗಾಗಲೇ ಬಾಕಿ ಇರುವ ಪ್ರಕರಣಗಳಲ್ಲಿ ವಾದಿ ಅಥವಾ ಪ್ರತಿವಾದಿಗಳಿಗೆ ತಮ್ಮ ಆರ್ಥಿಕ ದುರ್ಬಲತೆಯ ಅಫಿಡವಿಟ್ ಸಲ್ಲಿಸಿ ಶೀಘ್ರ ವಿಚಾರಣೆಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಿವಿಲ್ ಪ್ರಕ್ರಿಯೆ ಸಂಹಿತೆ ಕರ್ನಾಟಕ ತಿದ್ದುಪಡಿ ವಿಧೇಯಕ -2023 ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತದೆ. ದೇಶದ ಯಾವುದೇ ರಾಜ್ಯಗಳಲ್ಲಿ ಈ ರೀತಿ ಬಡವರ ವ್ಯಾಜ್ಯಗಳನ್ನು ಶೀಘ್ರ ಪರಿಹರಿಸಲು ಮಸೂದೆಗಳು ಮಂಡನೆಯಾಗಿಲ್ಲ. ಬಡವರು, ಸಣ್ಣ ರೈತರು ಹಣ ವೆಚ್ಚ ಮಾಡಿ ವರ್ಷಗಟ್ಟಲೆ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

2023ರ ಜುಲೈ 19, 20ರಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಅಂಗೀಕಾರ ಪಡೆದುಕೊಂಡ ವಿಧೇಯಕವನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದ್ದು, ಫೆಬ್ರವರಿ 18ರಂದು ರಾಷ್ಟ್ರಪತಿಗಳು ತಿದ್ದುಪಡಿ ಅಧಿನಿಯಮಕ್ಕೆ ಅಂಕಿತ ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...