ಕೋವಿಡ್ ಸೋಂಕಿನ ಎರಡನೇ ಅಲೆ ತಣ್ಣಗಾದ ಬಳಿಕ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ. ಕಳೆದ 6-8 ವಾರಗಳ ಅವಧಿಯಲ್ಲಿ ಹಾಲಿಡೇ ಹಾಗೂ ಬ್ಯುಸಿನೆಸ್ ಟ್ರಿಪ್‌ಗಳು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಮೇಕ್ ಮೈಟ್ರಿಪ್, ಕ್ಲಿಯರ್‌ಟ್ರಿಪ್, ಈಸ್ ಮೈಟ್ರಿಲ್‌ನಂಥ ಕಂಪನಿಗಳು ಪ್ರತಿಭೆಗಳು ಹೈರಿಂಗ್ ಭರಾಟೆ ಜೋರು ಮಾಡಿವೆ.
ಸಾಂಕ್ರಮಿಕದ ಕಾರಣದಿಂದ ಕಳೆದ 15 ತಿಂಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಕೈಬಿಟ್ಟಿದ್ದ ಪ್ರವಾಸೋದ್ಯಮ ಕ್ಷೇತ್ರ ಇದೀಗ ಲಸಿಕಾ ಕಾರ್ಯಕ್ರಮ ಜೋರಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಮೈಕೊಡವಿ ಎದ್ದೇಳುತ್ತಿದೆ.
ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ, 25 ಲಕ್ಷ ರೂ.ವರೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಜೂನ್‌ನಿಂದ ಆಚೆಗೆ ದೇಶಾದ್ಯಂತ ಫ್ಲೈಟ್‌ಗಳು, ಹೊಟೇಲ್‌ಗಳು, ಕ್ಯಾಬ್‌ಗಳು, ರೈಲುಗಳು ಹಾಗೂ ಹಾಲಿಡೇಗಳ ಬುಕಿಂಗ್‌ನಲ್ಲಿ ಚೇತರಿಕೆ ಕಾಣುತ್ತಿದೆ. ಇದೇ ವೇಳೆ ಸ್ಟೇಕೇಷನ್, ವರ್ಕೇಷನ್‌ಗಳಂಥ ಪ್ರಯಾಣದ ಟ್ರೆಂಡ್‌ಗಳು ಚುರುಕು ಪಡೆದಿದ್ದು, ಲಕ್ಸೂರಿ ಪ್ರಯಾಣಕ್ಕೂ ಬೇಡಿಕೆ ಜೋರಾಗುತ್ತಿದೆ.
ಮೇಕ್ ಮೈಟ್ರಿಪ್ ಹೊಸದಾಗಿ 200 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಚಿಂತಿಸುತ್ತಿದ್ದರೆ, 390 ಸಿಬ್ಬಂದಿಯ ಈಸ್‌ಮೈಟ್ರಿಪ್ ಮುಂದಿನ ಒಂದು ವರ್ಷದ ಅವಧಿಯಲ್ಲಿ ಸಿಬ್ಬಂದಿ ಬಲವನ್ನು 50%ನಷ್ಟು ವರ್ಧಿಸಲು ಚಿಂತನೆ ನಡೆಸಿದೆ.