ಬೆಂಗಳೂರು: 7ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಸಾಮೂಹಿಕ ವಿಮಾ ಯೋಜನೆ(EGIS) ವಂತಿಗೆ ಮೊತ್ತವನ್ನು ಪರಿಷ್ಕರಿಸಲಾಗಿದೆ.
ನೌಕರರ ಸಾಮೂಹಿಕ ವಿಮಾ ವಂತಿಗೆ ಪರಿಷ್ಕರಣೆಯ ಸಂಬಂಧ ಸರ್ಕಾರದಿಂದ ಆದೇಶವು ಹೊರಡಿಸದೆಯೇ, ವೇತನ ಬಟವಾಡೆ ಅಧಿಕಾರಿಗಳು 08/2024 ರ ಮಾಹೆಯ ವೇತನದಲ್ಲಿ ಹೊಸ EGIS ವಂತಿಗೆ(ಹೆಚ್ಚಿನ) ಕಟಾಯಿಸಿದ್ದು, ಸರ್ಕಾರದಿಂದ ಆದೇಶವು ಹೊರಡಿಸಿದ ನಂತರ ಕಟಾಯಿಸಬೇಕಾಗಿರುತ್ತದೆ. ಈ ಹೆಚ್ಚಿನ ವಂತಿಗೆಯನ್ನು ಮುಂದಿನ ತಿಂಗಳ ವಂತಿಕೆಗೆ ಹೊಂದಾಣಿಕೆ ಮಾಡಲು ಹಾಗೂ ಯಾವ ನೌಕರರ ಹೆಚ್ಚಿನ ವಂತಿಗೆ ಹಿಡಿಯಲಾಗಿದೆಯೋ ಅವರುಗಳ ಪಟ್ಟಿಯನ್ನು ಪಡೆದು, ಕ್ರಮತೆಗೆದುಕೊಳ್ಳುವ ಸಂಬಂಧ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ನಿರ್ದೇಶನಾಲಯದಿಂದ ನಿರ್ದೇಶನ ನೀಡಲಾಗಿದೆ.
ಉಲ್ಲೇಖಿತ ಆದೇಶದಂತೆ ನೌಕರರ ಸಮೂಹ ವಿಮಾ ವಂತಿಗೆ ಪರಿಷ್ಕರಿಸಲಾಗಿದ್ದು ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಹೊಸ ಮತ್ತು ಹಳೆಯ ವಿಮಾ ವಂತಿಗೆಯನ್ನು ಆಯ್ಕೆ ಮಾಡಲು “ಆಯ್ಕೆ” (Option) ಬಿಡಲಾಗಿದೆ. ವೇತನ ಸೆಳೆಯುವ ಮತ್ತು ಬಟವಾಡೆ ಅಧಿಕಾರಿರವರು ಸರ್ಕಾರವು ಸಾಮೂಹಿಕ ವಿಮಾ ಯೋಜನೆಯ ಪ್ರತ್ಯೇಕ ಆದೇಶವನ್ನು ಹೊರಡಿಸಿದ ನಂತರ ಹೊಸ ಸಮೂಹ ವಿಮಾ ವಂತಿಗೆಯನ್ನು ಆಯ್ಕೆಮಾಡಬೇಕಾಗಿತ್ತು. ಆದರೆ ವೇತನ ಸೆಳೆಯುವ ಮತ್ತು ಬಟವಾಡೆ ಅಧಿಕಾರಿರವರು ಹೊಸ ಸಾಮೂಹಿಕ ವಿಮಾ ಯೋಜನೆ – (EGIS) ವಂತಿಗೆ ಯ “ಅಯ್ಕೆ’ (Option) ಮಾಡಿರುವುದು ಕಂಡುಬಂದಿರುತ್ತದೆ.
ಸಾಮಾನ್ಯವಾಗಿ EGIS Master ನಲ್ಲಿ ಹೊಸ ಕಂತಿನ ಮಾಹಿತಿ ಲಭ್ಯಮಾಡುವುದು ಪ್ರಕ್ರಿಯೆ ಆಗಿರುತ್ತದೆ. ಆದರೆ, DDO ಗಳು ಈ ರೀತಿ ಹೊಸ EGIS ವಂತಿಗೆ(ಹೆಚ್ಚಿನ) ಕಟಾಯಿಸಿರುವುದರಿಂದ. ಮುಂದಿನ ಆದೇಶದ ವರೆಗೆ ಹಿಂಪಡೆಯಲಾಗಿದೆ. ಈ ತಿಂಗಳಲ್ಲಿ ಹೆಚ್ಚಿನ ವಂತಿಗೆ. ಇದು ಸರಾಸರಿ double ಆಗಿರುವುದುರಿಂದ, ಮುಂದಿನ ತಿಂಗಳ ವಂತಿಕೆಯನ್ನು DDO ಗಳಿಗೆ ತಡೆಯಲು ಹೇಳಿ. ಈ ಹೆಚ್ಚಿನ ವಂತಿಗೆಯನ್ನು ಮುಂದಿನ ತಿಂಗಳ ವಂತಿಕೆಗೆ 10 ಹೊಂದಾಣಿಕೆ ಮಾಡಲು ಕೋರಿದೆ.